ವಿಜಯನಗರ: ಹಂಪಿಯ (Hampi) ಬೀದಿಬದಿಯ ವ್ಯಾಪಾರಿಯ ಪುತ್ರ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ (Mechanical Engineering) 3ನೇ ರ‍್ಯಾಂಕ್ (3rd rank) ಪಡೆದಿದ್ದಾರೆ.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದ ತುಂಗಭದ್ರ ನದಿ ದಂಡೆಯ ಮೇಲೆ ಚಹಾ ಮತ್ತು ಉಪಾಹಾರದ ಸಣ್ಣ ತಳ್ಳು ಗಾಡಿ ಹೊಂದಿರುವ ಎ. ಪದ್ಮಾವತಿ ಹಾಗೂ ಎ. ನರಸರಾಜ ಅವರ ಪುತ್ರ ಎ. ಪವನ್ ಕುಮಾರ್ ಎಂಬುವವರೇ ರ‍್ಯಾಂಕ್ ಗಳಿಸಿರುವ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ.
2022-23 ನೇ ಸಾಲಿನ ಶೈಕ್ಷಣಿಕ ಸಾಲಿನ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಒಟ್ಟು 9.46 ಸಿ.ಜಿ.ಪಿ.ಎ ಅಂಕ ಪಡೆದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 3ನೇ ರ‍್ಯಾಂಕ್ ಅನ್ನು ಪಡೆದಿದ್ದಾರೆ.
ಇದನ್ನೂ ಓದಿ: IND vs WI 3rd Odi: ಐಷಾರಾಮಿ ಬೇಡ,ಮೂಲ ಸೌಕರ್ಯ ಒದಗಿಸಿ; ಹಾರ್ದಿಕ್ ಪಾಂಡ್ಯ ಅಸಮಾಧಾನ
ಹೊಸಪೇಟೆಯ ಪ್ರೌಢದೇವರಾಯ ಕಾಲೇಜಿನ ವಿದ್ಯಾರ್ಥಿಯಾಗಿರುವ ಎ. ಪವನ್ ಕುಮಾರ್ ಬಡತನದಲ್ಲಿ ಅರಳಿದ ಪ್ರತಿಭೆಯಾಗಿದ್ದು, ತಂದೆ-ತಾಯಿ ದಿನನಿತ್ಯ ಬೀದಿ ಬದಿಯಲ್ಲಿ ವ್ಯಾಪಾರವನ್ನು ಮಾಡಿಕೊಂಡು ಕಷ್ಟಪಟ್ಟು ಮಗನನ್ನು ಓದಿಸಿದ್ದಾರೆ. ಎಂಜಿನಿಯರಿಂಗ್ ಪದವಿಯಲ್ಲಿ ಪುತ್ರ 3ನೇ ರ‍್ಯಾಂಕ್ ಪಡೆದಿರುವುದಕ್ಕೆ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.