ಹಗರಿಬೊಮ್ಮನಹಳ್ಳಿ: ಸರ್ಕಾರದ ಯೋಜನೆಗಳು (government schemes) ಜನಸಾಮಾನ್ಯರಿಗೆ ಸರಳವಾಗಿ (Easier) ಮತ್ತು ಶೀಘ್ರವಾಗಿ (faster) ತಲುಪುವಂತಹ ವ್ಯವಸ್ಥೆಯ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸೇರಿದಂತೆ ಕ್ಷೇತ್ರದಲ್ಲಿಯೂ ‘ಪ್ರಜಾಪ್ರತಿನಿಧಿ ಸಮಿತಿ’ (Representative Committee) ರಚನೆ ಮಾಡಲಾಗುವುದು ಎಂದು ಶಾಸಕ ಕೆ.ನೇಮರಾಜ್ ನಾಯ್ಕ್ ಹೇಳಿದರು.
ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಬಹುದಿನದ ಕನಸಾಗಿದ್ದು, ಕ್ಷೇತ್ರದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳನ್ನು ಕೈಗೊಳ್ಳುವ ಮೂಲಕ, ಜನಸಂಪರ್ಕ ಮತ್ತು ಜನಪ್ರತಿನಿಧಿಗಳ ನಡುವಿನ ಸಂಬಂಧ ಗಟ್ಟಿಗೊಳಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಮತ್ತು ತ್ವರಿತಗತಿಯಲ್ಲಿ ಕೆಲಸಗಳು ನೆರವೇರಬೇಕು ಎಂದು ಇಂತಹ ಸಂಕಲ್ಪ ಮಾಡಿದ್ದೇವೆ ಎಂದರು.
ಇದನ್ನೂ ಓದಿ: Tushar Deshpande : ತುಷಾರ್ ದೇಶಪಾಂಡೆ ಎಂಗೇಜ್ಮೆಂಟ್ ಮಾಡಿಕೊಂಡ ಬಾಲ್ಯದ ಗೆಳತಿ ಯಾರು?
ಜನತೆಯ ಆಶೋತ್ತರಗಳು ನೆರವೇರಬೇಕು ಎನ್ನುವ ಸದಸುದ್ದೇಶದಿಂದ ತಾಲೂಕಿನ 27 ಇಲಾಖೆಗಳು ಈ ಸಮಿತಿಯಡಿಯಲ್ಲಿ ಸೇರಲ್ಪಡುತ್ತವೆ. ಜನಸಾಮಾನ್ಯರ ಮೂಲಭೂತ ಸೌಕರ್ಯಕ್ಕಾಗಿ ಹಾಗೂ ವೈಯಕ್ತಿಕ ಸೌಲಭ್ಯಗಳನ್ನು ಪಡೆಯುವ ಪ್ರಯತ್ನದಲ್ಲಿ ಕಚೇರಿಗಳಿಗೆ ಅಲೆಯವುದು ತಪ್ಪಿಸುವ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸ್ಪಂದಿಸುತ್ತಾರೆ, ಇದು ನನ್ನ ಕನಸಿನ ಕೂಸು, ಕ್ಷೇತ್ರದಲ್ಲಿಯೇ ಇದಕ್ಕೆ ಅಪಾರವಾದ ಬೆಂಬಲ ದೊರೆಯುತ್ತದೆ ಎನ್ನುವ ನಂಬಿಕೆ ನನಗಿದೆ ಎಂದರು.
ಇದನ್ನೂ ಓದಿ: ITR filing : ಬಾಡಿಗೆಯ ಮೇಲೆ ತೆರಿಗೆ ಅನುಕೂಲಗಳನ್ನು ಪಡೆಯುವುದು ಹೇಗೆ?
ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾ.ಪಂ.ಗಳು ಸೇರಿದಂತೆ ಕಂದಾಯ ಇಲಾಖೆಯಲ್ಲಿ ಯಾವುದೇ ದಾಖಲಾತಿ ಪಡೆಯಲು ಜನ ಸಾಮಾನ್ಯರು ಹೈರಾಣಾರಾಗುತ್ತಿದ್ದಾರೆ. ಇದನ್ನು ತಪ್ಪಿಸಲು, ನನ್ನೊಂದಿಗೆ ಅಧಿಕಾರಿಗಳು ಅಧಿಕಾರ ನಿರ್ವಹಣೆಯಲ್ಲಿ ಆಡಳಿತಕ್ಕೆ ಚುರುಕು ಕಾಣಲು ಇಂತಹ ಸಮಿತಿ ಅವಶ್ಯವಾಗಿದೆ ಎಂದ ಶಾಸಕರು, ಪ್ರತಿ ತಿಂಗಳಿನ ಮೊದಲ ಸೋಮವಾರ ಗ್ರಾಮೀಣದಲ್ಲಿ, ಎರಡನೇ ಸೋಮವಾರ ಪಟ್ಟಣದಲ್ಲಿ ಇದಕ್ಕೂ ಮಿಗಿಲಾದ ಸಮಸ್ಯೆಗಳನ್ನು ಕ್ಷೇತ್ರದ ಸಮಿತಿಯ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಇದಾಗಿದೆ ಎಂದರು.
ಇದನ್ನೂ ಓದಿ: Weather Report: ಮುಂಗಾರು ಚುರುಕು; ಜೂ.17ರವರೆಗೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
ಈ ವೇಳೆ ಪುರಸಭೆ ಸದಸ್ಯರಾದ ಬಿ.ಗಂಗಾಧರ, ಜನ್ನು ನಾಗರಾಜ್, ವಿ.ವೀರಣ್ಣ, ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಟಿಎಪಿಸಿಎಂಎಸ್ ಅಧ್ಯಕ್ಷ ಭರಮರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಕಿನ್ನಾಳ್ ಸುಭಾಷ್, ಕನ್ನಿಹಳ್ಳಿ ಚಂದ್ರಶೇಖರ್, ಬ್ಯಾಟಿ ನಾಗರಾಜ್, ಬಣಕಾರ ಗೋಣೆಪ್ಪ, ಪಾಂಡುರಂಗ ನಾಯ್ಕ್, ಚಿತ್ತವಾಡ್ಗಿ ಪ್ರಕಾಶ್, ಎಚ್.ಎಂ.ವಿಜಯಕುಮಾರ್, ಐನಳ್ಳಿ ಸೋಮಶೇಖರ್, ಸರ್ಧಾರ ಯಮನೂರ, ತಳವಾರ ಕೊಟ್ರೇಶ, ಬಡಿಗೇರ್ ಬಸವರಾಜ್, ಸಿದ್ದರಾಜ್, ಇಕ್ಬಾಲ್‌ಖಾಜಾ, ನಿಯಾಜ್, ರಾಹುಲ್‌ನಾಯ್ಕ್ ಮತ್ತು ಆಪ್ತ ಸಹಾಯಕ ದೊಡ್ಡಬಸಪ್ಪ ರೆಡ್ಡಿ ಮತ್ತಿತರರು ಇದ್ದರು.