ಹಗರಿಬೊಮ್ಮನಹಳ್ಳಿ: ಮುಂಗಾರು ಮುನಿಸು ರೈತರಲ್ಲಿ (Farmers) ಆತಂಕ ಮನೆ ಮಾಡಿದ್ದು, ಮಳೆರಾಯನಿಗಾಗಿ (Rain) ಪಟ್ಟಣದ ರಾಮನಗರದ ರೈತರ ಓಣಿಯ ಯುವಕರು ಭಕ್ತಿಯಿಂದ ನಾನಾ ದೇಗುಲಗಳಿಗೆ ತೆರಳಿ 101 ಕೊಡ ನೀರಿನಿಂದ ಅಭಿಷೇಕ ಮಾಡಿದರು.
ಮಳೆಗಾಲ ಆರಂಭವಾಗಿ ಸುಮಾರು ಮುಂಗಾರಿನ 6 ಮಳೆ ನಕ್ಷತ್ರಗಳು ಮುಗಿಯುವ ಕಾಲ ಹತ್ತಿರವಿದ್ದರೂ, ಇಲ್ಲಿಯವರೆಗೂ ನಿರೀಕ್ಷಿತ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: KFCSC Recruitment 2023 : ಆಹಾರ ನಿಗಮದಲ್ಲಿ 386 ಹುದ್ದೆಗಳಿಗೆ ನೇಮಕ; ವಿದ್ಯಾರ್ಹತೆ ಏನು? ಸ್ಪರ್ಧಾತ್ಮಕ ಪರೀಕ್ಷೆ ಹೇಗೆ?
ಅಲ್ಪ ಪ್ರಮಾಣದಲ್ಲಿ ರೋಹಿಣಿ ಮಳೆ ಸುರಿದ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಭೂಮಿಗೆ ಬೀಜವನ್ನು ಹಾಕಿದ್ದು, ಬಿತ್ತಿದ ಬೀಜ ಹುಟ್ಟುವುದಿರಲಿ, ಮೊಳಕೆಯೊಡೆಯುವುದೆ ಭೂಮಿಯಲ್ಲಿಯೇ ಕರಕಲಾಗಿವೆ. ಈ ಹಿನ್ನಲೆಯಲ್ಲಿ ವರುಣನ ಕೃಪೆಗಾಗಿ ನಾನಾ ದೇಗುಲಗಳ ದೇವರ ಮೊರೆಯೋದ ರೈತರ ಓಣಿಯ ಯುವಕರು ತುಂಬಿದ ಕೊಡಗಳನು ಹೊತ್ತು ದೇಗುಲದ ಮೂರ್ತಿಗಳಿಗೆ ಅಭಿಷೇಕ ಮಾಡಿದರು.
ರೈತರ ಓಣಿಯ ಯುವಕರು ಶ್ರೀಗಾಳೆಮ್ಮ ದೇಗುಲ, ಶ್ರೀನರೆಗಲ್ ದುರುಗಮ್ಮ, ಶ್ರೀಆಂಜನೇಯ ಸ್ವಾಮಿ, ಶ್ರೀಈಶ್ವರ ದೇಗುಲ ಸೇರಿದಂತೆ ಹಲವು ದೇಗುಲಗಳಿಗೆ ತೆರಳಿ ನೀರೆರೆದು ದೇವರನ್ನು ಪ್ರಾರ್ಥಿಸಿದರು.
ಇದನ್ನೂ ಓದಿ: Dhoni vs Jadeja: ಧೋನಿ ಅಭಿಮಾನಿಗಳಿಂದ ಜಡೇಜಾಗೆ ಬೇಸರವಾಗಿದ್ದು ನಿಜ; ಸಿಇಓ ವಿಶ್ವನಾಥನ್
ಈ ವೇಳೆ ರೈತರ ಓಣಿಯ ಬಾರಿಕರ ಬಾಪೂಜಿ, ಗಾಳಿರಾಜ್, ಸರ್ದಾರ್ ಯಮನೂರಪ್ಪ, ಹಳ್ಳಳ್ಳಿ ರಾಮಚಂದ್ರಪ್ಪ, ಮಡಿವಾಳರ ಅಶೋಕ, ವಿರುಪಾಕ್ಷಿ, ಚಿಗರಿ ಪರಶುರಾಮ್, ಎಚ್.ಸಂತೋಷ್, ಸೆರೆಗಾರ್ ತಿರುಕಪ್ಪ, ಮತ್ತಿತರರು ಇದ್ದರು.
ಮಳೆಗಾಗಿ ಗಂಗೆಪೂಜೆ
ಇನ್ನು ಪುರಸಭೆ ಸದಸ್ಯ ವಿ.ವೀರೇಶ್ ಹಗರಿಹಳ್ಳದ ಪಕ್ಕದಲ್ಲಿರುವ ಗುಡ್ಡದ ಈಶ್ವರ ದೇಗುಲದಲ್ಲಿ ಮಳೆಗಾಗಿ ಗಂಗೆಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಬಿ.ಬಸವರಾಜ್, ತೆಲುಗೋಳಿ ರಾಜಪ್ಪ, ಗೋವಿಂದ್ ರಾಜ್, ಮಹಾಂತೇಶ, ವಿ.ಯಲ್ಲಪ್ಪ, ಭೀಮಪ್ಪ ಮತ್ತು ಭೋವಿ ಸಮಾಜದ ದೈವಸ್ಥರು ವರುಣನಿಗಾಗಿ ಪ್ರಾರ್ಥಿಸಿದರು.
ಇದನ್ನೂ ಓದಿ: PM Modi US Visit: ಮೋದಿ ಸುದ್ದಿಗೋಷ್ಠಿಗೆ ಕೂಡಿಬಂತು ಕಾಲ; ಎಷ್ಟು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಗೊತ್ತಾ?
ಈ ವೇಳೆ ಮಾತನಾಡಿದ ಹಗರಿಬೊಮ್ಮನಹಳ್ಳಿ ಪುರಸಭೆ ಸದಸ್ಯ ವಿ.ವೀರೇಶ್, ಕಳೆದೆರಡು ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದು ನಮ್ಮ ಭಾಗದ ರೈತರ ಮೊಗದಲ್ಲಿ ನಗೆ ಚೆಲ್ಲಿತ್ತು. ಈ ವರ್ಷ ಮಳೆಗಾಲ ಆರಂಭವಾಗಿ ಇಲ್ಲಿಯವರೆಗೂ ರೈತರ ನಿರೀಕ್ಷೆಯಷ್ಟು ಮಳೆಯಾಗದಿರುವುದು ಆತಂಕ ಮೂಡಿದೆ. ದೇವರನ್ನು ನಂಬಿದ ರೈತರನ್ನು ದೇವರು ಕೈಬಿಡುವುದಿಲ್ಲ. ಕೃಪೆ ತೋರಿಸುತ್ತಾರೆ. ಉತ್ತಮ ಮಳೆ ನಿರೀಕ್ಷೆಯಲ್ಲಿ ಈ ಪೂಜೆಯಾಗುತ್ತಿದೆ ಎಂದು ತಿಳಿಸಿದರು.
.