Site icon Vistara News

Vijayanagara News: ಆಟೊ ನೋಂದಣಿ, ಚಾಲನಾ ಪರವಾನಗಿ ಕಡ್ಡಾಯ: ಪಿಎಸ್ಐ ಎಂ. ಧನಂಜಯ

Kudligi Police Station PSI M Dhananjaya spoke in an awareness workshop

ಕೂಡ್ಲಿಗಿ: ಆಟೋ ಚಾಲಕರು (Auto drivers) ಕಡ್ಡಾಯವಾಗಿ ತಮ್ಮ ಆಟೋಗಳ ನೋಂದಣಿ (Registration) ಮಾಡುವ ಜತೆಗೆ ತಮ್ಮ ಚಾಲನಾ ಪರವಾನಗಿಯನ್ನು (License) ಸಹ ಪಡೆದಿರಬೇಕು ಎಂದು ಕೂಡ್ಲಿಗಿ ಠಾಣೆ ಪಿಎಸ್ಐ ಎಂ.ಧನಂಜಯ ತಿಳಿಸಿದರು.

ಪಟ್ಟಣದ ಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಪೆಡೆರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ವತಿಯಿಂದ ಆಟೋ ಚಾಲಕರಿಗೆ ಕಾನೂನು ಅರಿವು ಹಾಗೂ ರಸ್ತೆ ಸುರಕ್ಷತಾ ಬಗ್ಗೆ ಜಾಗೃತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.

ಇದನ್ನೂ ಓದಿ: Yadgiri News: ಮಳೆಯ ಅವಕೃಪೆ; ಬೆಳೆ ಉಳಿಸಿಕೊಳ್ಳಲು ತಂಬಿಗೆ ಮೂಲಕ ನೀರು ಹಾಯಿಸುತ್ತಿರುವ ರೈತರು

ಆಟೋಗಳಿಗೆ ನೋಂದಣಿ ಇಲ್ಲದೆ ಹಾಗೂ ಚಾಲಕರು ಚಾಲನಾ ಪರವಾನಿಗೆ ಇಲ್ಲದೆ ಓಡಿಸುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಆದ್ದರಿಂದ ತಮ್ಮ ವಾಹನಗಳ ಸೂಕ್ತ ದಾಖಲೆಗಳನ್ನು ಹೊಂದಿರಬೇಕು, ವಾಹನದ ಪರವಾನಗಿ, ಚಾಲಕನ ಪರವಾನಗಿ ಹಾಗೂ ವಿಮೆಯನ್ನು ಮಾಡಿಸಿ ಕೊಂಡು ಆಟೋಗಳನ್ನು ಓಡಿಸಬೇಕು.

ಇದರಿಂದ ನೀವುಗಳು ಸುರಕ್ಷತೆ ಜತೆ ಪ್ರಯಾಣಿಕರು ಸಹ ಸುರಕ್ಷಿತರಾಗಿರುತ್ತಾರೆ. ಅಕಸ್ಮಾತ್ ಅಪಘಾತ ಸಂಭಂದಿಸಿದಲ್ಲಿ ವಿಮೆ ಇದ್ದರೆ, ಅದನ್ನು ಕ್ಲೈಮ್ ಮಾಡಿ ಪರಿಹಾರ ನೀಡಲು ಅನುಕೂಲವಾಗುತ್ತದೆ. ಎಂದು ತಿಳಿಸಿದರು.

ಪ್ರಯಾಣಿಕರ ಜತೆ ಉತ್ತಮ ಬಾಂಧವ್ಯ ಹೊಂದಿ ಅವರ ನಂಬಿಕೆ ಜತೆ ಅವರನ್ನು ಸುರಕ್ಷಿತವಾದ ಜಾಗ ತಲುಪಿಸುವಂತೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ಕೊರೊನಾ ವೇಳೆ 19 ವರ್ಷದವನ ಹವ್ಯಾಸವು ಕೋಟ್ಯಧೀಶನನ್ನಾಗಿ ಮಾಡಿತು; ಚಾಕೊಲೇಟ್‌ ಬಾಯ್ ಕತೆ

ಆಟೋ ಚಾಲಕರು ಕಾನೂನುಗಳನ್ನು ಗೌರವಿಸಿ ಎಂದು ಸಲಹೆ ನೀಡಿದರು.

ಕಾನೂನು ಸಲಹೆಗಾರ ಹಾಗೂ ವಕೀಲ ಸಿ.ವಿರುಪಾಕ್ಷಪ್ಪ ಮಾತನಾಡಿ, ವಾಹನದ ಹಾಗೂ ಚಾಲಕರ ಪರವಾನಗಿ ಇಲ್ಲದೆ ಇದ್ದರೆ ಕಾನೂನಿನ ತೊಂದರೆ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಫೆಡೆರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಜಿಲ್ಲಾಧ್ಯಕ್ಷ ಸಂತೋಷ ಕಲ್ಮಠ, ಕಜಾಪ ಅಧ್ಯಕ್ಷ ಕೆ.ಎಂ.ವೀರೇಶ್, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಮಾತಾನಾಡಿದರು.

ಇದನ್ನೂ ಓದಿ: Lalbagh Tour : ಸಸ್ಯಕಾಶಿ ಲಾಲ್‌ಬಾಗ್‌ನೊಳಗೆ ಏನೇನಿದೆ? ಮರೆಯದೆ ನೋಡಿ…

ಈ ವೇಳೆ ಫೆಡೆರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ನ ಹುಸೇನ್, ಮಂಜು ಮಯೂರ, ಜೆ. ಕುಮಾರಸ್ವಾಮಿ, ನಲ್ಲಮುತ್ತಿ ದುರುಗೇಶ್, ಇಸ್ಮಾಯಿಲ್, ರಮೇಶ್, ಮಲ್ಲಿಕಾರ್ಜುನ, ರೆಡ್ಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version