ಕೂಡ್ಲಿಗಿ: ಸಮಸ್ಥಿತಿ ಪ್ರಜ್ಞೆಯಿಂದ ಬಾಳಿದರೆ ಮಾತ್ರ ಜೀವನ (Life) ಸುಗಮವಾಗಿ ನೆರವೇರಲು ಸಾಧ್ಯ ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಭಕ್ತಾದಿಗಳು ಹಮ್ಮಿಕೊಂಡಿದ್ದ ರುದ್ರಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಶ್ರೀಗಳು, ವೈಭೋಗದ ಜೀವನವನ್ನು ನಡೆಸಲು ಅನ್ಯಾಯದ ಹಾದಿಯನ್ನು ತುಳಿಯಬೇಡಿ ಎಂದು ಹೇಳಿದರು.
ಆದರ್ಶ ಜೀವನವನ್ನು ಸಾಗಿಸಿದ ಮಹಾತ್ಮರು ಇಂದಿಗೂ ನಮ್ಮೊಂದಿಗೆ ಇದ್ದಾರೆ. ಅವರ ಸಾರ್ಥಕ ಜೀವನ, ಸಾರ್ವಜನಿಕವಾಗಿ ಮಾಡಿದ ಪುಣ್ಯದ ಕಾರ್ಯಗಳು ಅವರ ನೆನಪನ್ನು ಉಳಿಸಿವೆ ಎಂದು ತಿಳಿಸಿದರು.
ಇದನ್ನೂ ಓದಿ: Video Viral : ಕುದಾಪುರದಲ್ಲಿ ಓಡಾಡ್ತು ಚಿರತೆ! ವಿಡಿಯೊ ನಕಲಿ ಎಂದ ಡಿಆರ್‌ಡಿಒ
ಬದುಕೊಂದು ಹೋರಾಟವಾದರೂ, ಅದನ್ನು ಎದುರಿಸಿ ಬಾಳಬೇಕಾಗುತ್ತದೆ. ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯಲು ಗುರುವಿನ ಮಹತ್ವವನ್ನು ಅರಿಯಬೇಕಾಗುತ್ತದೆ ಎಂದರು.
ಇದನ್ನೂ ಓದಿ: Raichur News: ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು; ಒಂದು ಬೆಳೆಗೆ ಒಂದು ಲೋಟ ನೀರಿನ ಪ್ರಯೋಗ
ಈ ಸಂದರ್ಭದಲ್ಲಿ ಭಕ್ತಾದಿಗಳಾದ ಬಣಕಾರ ಕೊಟ್ರೇಶ್, ಭರತ್. ಧನುಷ್, ವೀರೇಶ್ ಅಂಗಡಿ, ವಿಶ್ವನಾಥ, ಎಚ್.ಎಂ. ಮಲ್ಲಿಕಾರ್ಜುನ, ಕೆ.ಎಂ. ಚಿದಾನಂದ, ಪರೋಟ ರಾಜು, ಕಪಟ್ರಾಳ್ ಚಂದ್ರಕಾಂತ್ ಸೇರಿದಂತೆ ಅನೇಕ ಭಕ್ತಾಧಿಗಳು ಪಾಲ್ಗೊಂಡಿದ್ದರು.