Site icon Vistara News

Vijayanagara News: ಸಿ.ಎ. ಗಾಳೆಪ್ಪಗೆ ಸ್ವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ

Swarna Kannadiga State Award for C A Galeppa at Vijayanagara

ವಿಜಯನಗರ: ಅಕ್ಷರ ದೀಪ ಫೌಂಡೇಷನ್‌, ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ (Dharwad)-ಬೆಳಗಾವಿ (Belgaum) ಕೊಡಮಾಡುವ ಸ್ವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿಯನ್ನು (State Award) ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ಧಾರವಾಡದ ರಂಗಾಯಣದಲ್ಲಿ ನಡೆದ ರಾಜ್ಯ ಮಟ್ಟದ ಕವಿ ಕಾವ್ಯ ಸಂಗಮದ ಸಂಭ್ರಮಾಚರಣೆಯಲ್ಲಿ ಸಿ.ಎ. ಗಾಳೆಪ್ಪ ಅವರ ಸಾಮಾಜಿಕ ಕ್ಷೇತ್ರ ಕಾರ್ಯ ಗುರುತಿಸಿ, ಸ್ವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ITR Filing : ವಿಳಂಬಿತ ಐಟಿಆರ್‌ ಫೈಲಿಂಗ್‌ಗೆ ಕೊನೆಯ ದಿನ ಯಾವಾಗ?

ಗಾಳೆಪ್ಪ ಅವರು ಹತ್ತಾರು ವರ್ಷದಿಂದ ನಿರಂತರವಾಗಿ ರೈತರ ಪರವಾದ ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ರೈತರ ಪರವಾಗಿ ಸದಾ ಮಿಡಯುವ ಹೃದಯಕ್ಕೆ ಜೊತೆಗೆ ಸಮಾಜಕ್ಕೆ ಒಳಿತನ್ನು ಮಾಡುವ ಮೂಲಕ ಸಾಕಷ್ಟು ರೀತಿಯ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಗಾಳೆಪ್ಪ ಅವರಿಗೆ ಸ್ವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಹಸಿರು ಸೇನೆಯ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version