ಕೂಡ್ಲಿಗಿ: ಸಮೀಪದ ಹುರುಳಿಹಾಳು ಗ್ರಾಮದಲ್ಲಿ ಒಂದೇ ದಿನ ಐದು ದೇವಸ್ಥಾನಗಳಲ್ಲಿ (Five temples) ಹಾಗೂ ಬಣವೀಕಲ್ಲು ಗ್ರಾಮದ ಒಂದು ದೇವಸ್ಥಾನದಲ್ಲಿ ಕಳ್ಳತನ (Theft) ಮಾಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಹುರುಳಿಹಾಳ್ ಗ್ರಾಮದ ಹೊನ್ನಾಂಬಿಕೆ, ಈಶ್ವರ, ಆಂಜನೇಯ ಸ್ವಾಮಿ, ವೀರಭದ್ರೇಶ್ವರ ಹಾಗೂ ತಿಮ್ಮಪ್ಪ ಸ್ವಾಮಿ ಹಾಗೂ ಬಣವೀಕಲ್ಲು ಗ್ರಾಮದ ಈಶ್ವರ ದವಸ್ಥಾನ ಸೇರಿ ಒಟ್ಟು 6 ದೇವಸ್ಥಾನಗಳಲ್ಲಿ ಕಳ್ಳತನ ನಡೆದಿದೆ.
ಹೊನ್ನಾಂಬಿಕೆ ದೇವಿ ಮೂರ್ತಿಯ ಕೊರಳಲ್ಲಿದ್ದ ಚಿನ್ನದ ತಾಳಿ, ಸೊಂಟದ ಪಟ್ಟಿ, ಮೂಗುತಿ ಹಾಗೂ ಈಶ್ವರ ದೇವಸ್ಥಾನದಲ್ಲಿದ್ದ ಸ್ವಾಮಿಯ ಬೆಳ್ಳಿ ಮುಖವಾಡ ಹಾಗೂ ಎಲ್ಲ ದೇಗುಲಗಳಲ್ಲಿದ್ದ ಕಂಚು, ಹಿತ್ತಾಳೆಯ ಘಂಟೆಗಳು, ದೀಪಗಳು, ಶಂಖ, ಜಾಗಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಒಂದೇ ದಿನ ರಾತ್ರಿ ಐದು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Weather Report : ಕರಾವಳಿಯಲ್ಲಿ ತುಂತುರು, ಬೆಂಗಳೂರಲ್ಲಿ ಹಗುರ ಮಳೆ
ಹುರುಳಿಹಾಳು ಗ್ರಾಮದ ಹೊರವಲಯದಲ್ಲಿ ದೇವಸ್ಥಾನಗಳು ಇರುವುದರಿಂದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾನಹೊಸಹಳ್ಳಿ ಠಾಣೆ ಪಿಎಸ್ ಐ ಎರಿಯಪ್ಪ ಅಂಗಡಿ, ಸಿಬ್ಬಂದಿ ಜಗದೀಶ್, ವಿಜಯ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.