Site icon Vistara News

Vijayanagara News: ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿದ ಉಜ್ಜಯಿನಿ ಮರುಳಸಿದ್ದೇಶ್ವರ ರಥೋತ್ಸವ

Vijayanagara News Ujjain Marulasiddeshwar Rathotsava celebrated with grandeur in the midst of Bhaktasagara

ಕೊಟ್ಟೂರು: ಲಕ್ಷಾಂತರ ಭಕ್ತರ ಆರಾಧ್ಯದೈವ ಉಜ್ಜಯಿನಿ ಸದ್ಧರ್ಮ ಪೀಠದ ಒಡೆಯ ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಮಂಗಳವಾರ ಸಂಜೆ ವಿಜೃಂಭಣೆಯಿಂದ (Grandeur) ಭಕ್ತ ಸಾಗರದ ಮಧ್ಯೆ ನೆರವೇರಿತು.

ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಈ ಸಾಲಿನಲ್ಲಿ ಉಳಿದೆಲ್ಲ ರಥೋತ್ಸವಗಳ ಪೈಕಿ ಕೊನೆಯ ರಥೋತ್ಸವವಾಗಿದ್ದು, ಪುನರ್ವಸು ನಕ್ಷತ್ರದಲ್ಲಿ ಜರುಗಿತು.

ಇದನ್ನೂ ಓದಿ:Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ

ಇದಕ್ಕೂ ಮೊದಲು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಸಂಜೆ 6ರ ವೇಳೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮಹೋತ್ಸವದೊಂದಿಗೆ, ಸದ್ಧರ್ಮ ಪೀಠದ ಬಿರುದಾವಳಿಗಳೊಂದಿಗೆ ಹೊರತರಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಕುಳ್ಳಿರಿಸಲಾಯಿತು. ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ರಥವೇರಿ ಆಶೀರ್ವದಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಪಟಾಕಿ ಸವಾಲು

ಇದಕ್ಕೂ ಮೊದಲು ಸ್ವಾಮಿಯ ರಥದ ಪಟಾಕ್ಷಿ (ಪಟಾಕಿ) ಸವಾಲು ಪ್ರಕ್ರಿಯೆ ನಡೆಯಿತು. ಪಟಾಕ್ಷಿಯನ್ನು 3. 60 ಲಕ್ಷ ರೂಪಾಯಿಗಳಿಗೆ ಕೂಗಿ ತನ್ನದಾಗಿಸಿಕೊಂಡು ಶ್ರೀಸ್ವಾಮಿಗೆ ನಮಿಸಿದರು. ನಂತರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆ ನೆರೆದಿದ್ದ ಭಕ್ತರು ಬಾಳೆಹಣ್ಣು, ಸೂರುಬೆಲ್ಲ, ಧವನ ಮತ್ತಿತರರಗಳನ್ನು ರಾಶಿಯೋಪಾದಿಯಲ್ಲಿ ತೂರಿ ನಮಿಸಿ ಭಕ್ತಿ ಸಮರ್ಪಸಿದರು.

ಸಮಾಳದ ಆರ್ಭಟ, ನಂದಿಕೋಲುಗಳ ಕುಣಿತ ಮತ್ತಿತರ ವಾದ್ಯಗಳ ನಿನಾದದೊಂದಿಗೆ ರಥೋತ್ಸವ ಸಾಗಿ ಮುಖ್ಯ ಬಜಾರ ಮುಖಾಂತರ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗದ ಸ್ವಸ್ಥಾನದಲ್ಲಿ ಸಂಜೆ 7.30 ರ ಸುಮಾರಿಗೆ ನೆಲೆ ನಿಂತಿತು. ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತಸ್ತೋಮ ಪಾಲ್ಗೊಂಡು ರಥೋತ್ಸವನ್ನು ಕಣ್ತುಂಬಿಕೊಂಡರು.

Exit mobile version