Site icon Vistara News

Vijayanagara News: ಪವರ್ ಲಿಫ್ಟಿಂಗ್‌ನಲ್ಲಿ ಹೊಸ ದಾಖಲೆ ಬರೆದ ವಿಜಯವಾಣಿ

Vijayavani set a new record in power lifting

ವಿಜಯನಗರ: ಹುಬ್ಬಳ್ಳಿಯ ರೈಲ್ವೆ ಶತಾಬ್ದಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ (Power lifting) ಚಾಂಪಿಯನ್‌ಶಿಪ್‌-2023 ನಲ್ಲಿ ವಿಜಯನಗರ ಜಿಲ್ಲೆಯ ಪವರ್ ಲಿಫ್ಟರ್ (Power lifter) ವಿಜಯವಾಣಿ ಅವರು ಹೊಸ ದಾಖಲೆ (New record) ಬರೆದಿದ್ದಾರೆ.

ಧಾರವಾಡ ಜಿಲ್ಲಾ ಪವರ್ ಲಿಫ್ಟಿಂಗ್ ಹಾಗೂ ಹುಬ್ಬಳ್ಳಿ ಅಟೆರನಲ್ ಜಿಮ್ ವತಿಯಿಂದ ಏರ್ಪಡಿಸಿದ್ದ ಪವರ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ, ಈ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯ ಕ್ರೀಡಾಪಟು ವಿಜಯವಾಣಿ ಅವರು ಸೀನಿಯರ್ 76 ಕೆಜಿ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Viral News: ಶ್ವಾನಕ್ಕೂ ಬಂತು ಗುಂಡಿ ಗಂಡಾಂತರ; ಏಣಿ ಹಾಕಿ ಮೇಲೆತ್ತಿದ ಮಾತೆಯರು

ಅಲ್ಲದೆ ಈ ಹಿಂದೆ ತಾವೇ ನಿರ್ಮಿಸಿದ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ನಿರ್ಮಿಸಿರುವುದು ಮತ್ತೊಂದು ವಿಶೇಷವಾಗಿದೆ. ವಿಜಯವಾಣಿ ಅವರು ವೇಟ್‌ ಲಿಫ್ಟಿಂಗ್‌ನ ಮೂರು ಹಂತಗಳಲ್ಲಿ ಬೆಂಚ್ ಪ್ರೆಸ್‌ನಲ್ಲಿ 95 ಕೆಜಿ ರೆಕಾರ್ಡ್, ಡೆಡ್ ಲಿಫ್ಟಿಂಗ್ ನಲ್ಲಿ 165 ಕೆಜಿ ರೆಕಾರ್ಡ್, ಸ್ಕ್ವಟ್ ನಲ್ಲಿ 152.5 ಕೆಜಿ ಸೇರಿದಂತೆ ಟೋಟಲ್ ಲಿಫ್ಟ್ ರೆಕಾರ್ಡ್ 412.5 ಕೆಜಿ ಆಗಿದೆ.

ಇದನ್ನೂ ಓದಿ: Congress Protest: ಅಕ್ಕಿ ಕೊಡದ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಗರಂ: ಮೇಕಪ್‌ ಲೆಕ್ಕಿಸದೆ ಮಳೆಯಲ್ಲಿ ಪ್ರತಿಭಟಿಸಿದ್ದಕ್ಕೆ ಡಿಸಿಎಂ ಖುಷ್‌ ಹುವಾ!

ಕ್ರೀಡಾಪಟುವಿನ ಸಾಧನೆಯು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಮುಂದುವರೆಯಲಿ ಎಂದು ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ವಿಜೇತರು, ವಿಕ್ಟರಿ ಜಿಮ್ ತರಬೇತುದಾರ ವಲಿಬಾಷ ಹಾಗೂ ವಿಕ್ಟರಿ ಜಿಮ್‌ನ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.

Exit mobile version