ಹರಪನಹಳ್ಳಿ: ತಾಲೂಕಿನ ಬಾವಿಹಳ್ಳಿ ಗ್ರಾಮದಲ್ಲಿ ಕಾಡು ಹಂದಿಗಳ (Wild boar) ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಕಾಡುಹಂದಿಗಳ ಹಾವಳಿ ತಡೆದು, ಬೆಳೆಗೆ ರಕ್ಷಣೆ (Protection to crops) ಒದಗಿಸಬೇಕು ಎಂದು ಆಗ್ರಹಿಸಿ, ಗ್ರಾಮದ ರೈತರು (Farmers) ಪಟ್ಟಣದ ವಲಯ ಅರಣ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮೆಕ್ಕೆಜೋಳ, ಶೇಂಗಾ ಬಿತ್ತನೆ ಮಾಡಿದ್ದ ರೈತರ ಹೊಲಗಳಿಗೆ ಕಾಡು ಹಂದಿಗಳು ನುಗ್ಗಿ ಮೊಳಕೆಯೊಡೆದಿದ್ದ ಮೆಕ್ಕೆಜೋಳ ಹಾಗೂ ಶೇಂಗದ ಬೀಜಗಳನ್ನು ಹೆಕ್ಕಿ ತಿಂದು ಹೋಗಿದ್ದು ನಮಗೆ ಪರಿಹಾರ ನೀಡಬೇಕು. ಜತೆಗೆ ಹಂದಿಗಳ ಉಪಟಳದಿಂದ ರೈತರನ್ನು ಪಾರು ಮಾಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: Rain News : ಮಳೆ ಅವಾಂತರ; ರಾಯಚೂರಿನ 105 ಗ್ರಾಮಗಳಿಗೆ ಜಲ ಕಂಟಕ!
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಕಾಡು ಹಂದಿಗಳು ಹಾಗೂ ಇನ್ನಿತರೆ ಪ್ರಾಣಿಗಳಿಂದ ಹೊಲಗಳಿಗೆ ಹಾನಿಯಾಗಿದ್ದನ್ನು ಪರಿಶೀಲಿಸಿ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ವೈಯಕ್ತಿಕ ಗಮನಹರಿಸುತ್ತೇನೆ. ಹೊಲ ಗದ್ದೆಗಳಿಗೆ ನುಗ್ಗದಂತೆ ತಂಡ ರಚನೆ ಮಾಡಿ ಶಬ್ದಗಳ ಮುಖಾಂತರ ಪ್ರಾಣಿಗಳನ್ನು ಓಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: IND vs WI Odi: ಭಾರತ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್ ತಂಡ ಪ್ರಕಟ; ಹಲವು ಸ್ಟಾರ್ ಆಟಗಾರರ ಆಗಮನ
ಈ ವೇಳೆ ಗ್ರಾಮಸ್ಥರಾದ ಎಚ್. ಸುರೇಶ, ಟಿ. ಪರಮೇಶ್ವರ, ಕೆ.ಚಿನ್ನಪ್ಪ, ಎಚ್.ಭದ್ರಪ್ಪ, ಎನ್. ನಂದೇಶ, ಎನ್. ಅಜ್ಜಪ್ಪ, ಟಿ. ಬಸವರಾಜ, ಕೆ. ಜಗದೀಶ, ಎನ್. ಚಿದಾನಂದಪ್ಪ, ಬಿ. ರವಿಕುಮಾರ, ಕೆ. ಬಸವರಾಜ, ಟಿ. ಕೃಷ್ಣಪ್ಪ, ಎನ್. ನಂದೀಶ ಸೇರಿದಂತೆ ಇತರರು ಇದ್ದರು.