ಕೂಡ್ಲಿಗಿ: ಪಟ್ಟಣದ ಸರ್ಕಾರಿ ಅಂಗಡಿ ವೀರಮ್ಮ ತಿರುಕಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೂಡ್ಲಿಗಿ ಆರಕ್ಷಕ ಠಾಣೆಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನು (World Anti-Drug Day) ಆಚರಣೆ ಮಾಡಲಾಯಿತು.
ಕೂಡ್ಲಿಗಿ ಠಾಣೆಯ ಸಿಪಿಐ ವಸಂತ್. ವಿ. ಅಸೋದೆ ಮಾತನಾಡಿ, ಜೂನ್ 26ನ್ನು ‘ಅಂತಾರಾಷ್ಟ್ರೀಯ ಮಾದಕ ದೃವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನಾಗಿ ಆಚರಿಸಲಾಗುತ್ತದೆ. 1989ರ ಜೂನ್ 26ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅನುಮತಿಯೊಂದಿಗೆ ಈ ಆಚರಣೆ ಜಾರಿಗೆ ಬಂತು. ವಿಶ್ವದಾದ್ಯಂತ ಮಾದಕ ದ್ರವ್ಯ (ಡ್ರಗ್ಸ್) ಬಳಕೆ ಮತ್ತು ಸಾಗಾಟದ ನಿಷೇಧವೇ ಇದರ ಗುರಿ. 2021ರ ವರದಿಯ ಪ್ರಕಾರ ಜಗತ್ತಿನ ಸುಮಾರು 28 ಕೋಟಿಯಷ್ಟು ಜನರು ಈ ಮಾದಕ ದ್ರವ್ಯಗಳ ದಾಸರಾಗಿದ್ದಾರೆ ಎಂದರು.
ಇದನ್ನೂ ಓದಿ: Kusha Kapila: 6 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್
ಮಾದಕ ವಸ್ತುಗಳ ವಿರೋಧಿ ದಿನ ಅಂದರೆ ಅದನ್ನು ವಿರೋಧಿಸುವುದು, ಆ ನಿಟ್ಟಿನಲ್ಲಿ ನಾವು ಏನು ಮಾಡಬಹುದೆಂಬ ಚಿಂತನ-ಮಂಥನವನ್ನು ನಾವು ಈ ಸಮಯದಲ್ಲಿ ಮಾಡಲೇಬೇಕಾಗಿದೆ. ಪ್ರಾರಂಭದಲ್ಲಿದ್ದ ಅಭ್ಯಾಸ ನಂತರ ಚಟವಾಗಿ ಬದಲಾಗುತ್ತದೆ ಈ ಬಗ್ಗೆಯೂ ನಾವು ಚಿಂತಿಸಬೇಕಲ್ಲವೇ? ಯಾವುದೋ ಸಿನಿಮಾ, ನಾಟಕ, ಧಾರಾವಾಹಿಗಳ ಪ್ರಪಂಚದಲ್ಲಿ ಸರ್ವೇ ಸಾಮಾನ್ಯವಾಗಿ ಕಷ್ಟ ಬಂದಾಗ, ಹೆಚ್ಚು ಕೋಪ ಬಂದಾಗ, ಮನಸ್ಸಿಗೆ ಬೇಸರವಾದಾಗ ಮದ್ಯವನ್ನು ಕುಡಿಯುವ, ಬೀಡಿ ಸಿಗರೇಟು ಸೇದುವ ದೃಶ್ಯಗಳು ಕಾಣಿಸಿಗುತ್ತವೆ ಎಂದು ತಿಳಿಸಿದರು.
ಮಾದಕ ವ್ಯಸನ ನಮ್ಮ ಇಡೀ ದೇಹವನ್ನು ಆವರಿಸಿ, ನಿತ್ರಾಣ, ನರದೌರ್ಬಲ್ಯ, ಮೆದುಳಿಗೆ ಹಾನಿ, ಶ್ವಾಸಕೋಶ, ಯಕೃತ್ತು ಎಲ್ಲವನ್ನೂ ನುಂಗಿ ನೊಣೆಯುತ್ತದೆ. ಲೈಂಗಿಕ ದೌರ್ಬಲ್ಯ ಸಹ ಉಂಟಾಗುವ ಸಾಧ್ಯತೆಯಿದೆ. ಆಧುನೀಕರಣದ ಭರಾಟೆಯಲ್ಲಿ ಕಿಟ್ಟಿ ಪಾರ್ಟಿಗಳೆಂಬ ಮೋಹದಿಂದ ಮಹಿಳೆಯರೂ ಸಹಾ ಈಗ ಈ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ ಎಂದರು.
ಇದನ್ನೂ ಓದಿ: ಪಾಕ್ ನಾಯಕ ಬಾಬರ್ ಅಜಂ ಹುಟ್ಟುಹಬ್ಬಕ್ಕೂ ವಿಶ್ವಕಪ್ ಟೂರ್ನಿಗೂ ಇದೆ ಅವಿನಾಭಾವ ಸಂಬಂಧ
ಕುಡಿತ, ಪಾನ್ ಪರಾಗ್, ಗಾಂಜಾ, ಅಫೀಮು ಮತ್ತು ಕೆಲವು ಮತ್ತು ತರಿಸುವ ಮಾತ್ರೆಗಳು ಇತ್ಯಾದಿಗಳ ಅಭ್ಯಾಸದ ದುಷ್ಪರಿಣಾಮಗಳನ್ನು ಕಣ್ಣಾರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡಿರುತ್ತೇವೆ. ಅವರ ಮನೆಯವರು ಕಷ್ಟ ಪಡುವುದನ್ನು ನೋಡುತ್ತಿರುತ್ತೇವೆ. ಇದಕ್ಕೆ ಸಾಧ್ಯವಾದಷ್ಟು ವ್ಯಸನಿಗಳ ಮನಸ್ಸು ಪರಿವರ್ತನೆ ಮಾಡುವುದೊಂದೇ ದಾರಿ ಎಂದರು.
ನಂತರ ಪಿಎಸ್‌ಐ ಧನುಂಜಯ ಮಾತನಾಡಿದರು.
ಇದನ್ನೂ ಓದಿ: Rain News: ಕರಾವಳಿಯಲ್ಲಿ ಶುರುವಾಗಿದೆ ಗುಡ್ಡ ಕುಸಿತ ಭೀತಿ; ಹೆದ್ದಾರಿ ಸಂಚಾರವೀಗ ಬಹಳ ಫಜೀತಿ!
ಈ ಸಂದರ್ಭದಲ್ಲಿ ಉಪನ್ಯಾಸಕ ಪಿ.ಉಮೇಶ್, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.