ಹೊಸಪೇಟೆ: ವಾತಾವರಣದಲ್ಲಿರುವ ಪರಿಸರ (Environment) ಮಾಲಿನ್ಯ ತಡೆಗಟ್ಟುವ ಜತೆಗೆ ಮಾನವನ ಆರೋಗ್ಯಕ್ಕೂ (Health) ಸೈಕಲ್ (Bicycle) ಸವಾರಿ ಸಹಕಾರಿಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ ತಿಳಿಸಿದರು.
ನಗರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಜನಜಾಗೃತಿ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Odisha Train Accident: ‘ಸಂತ್ರಸ್ತರ ನೆರವಿಗೆ ನಾವಿದ್ದೇವೆ’, ರೈಲು ಅಪಘಾತಕ್ಕೆ ಕಂಬನಿ ಮಿಡಿದ ವಿಶ್ವ ನಾಯಕರು
ಹೆಚ್ಚುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ಉತ್ತಮ ಆರೋಗ್ಯ ವೃದ್ಧಿಗಾಗಿ ಬೈಸಿಕಲ್ ಸವಾರಿ ಅವಶ್ಯವಿದೆ. ಪ್ರತಿನಿತ್ಯದ ಚಟುವಟಿಕೆಯಲ್ಲಿ ಕನಿಷ್ಠ 5-10 ಕಿಮೀ. ಸೈಕಲ್ ಓಡಿಸುವುದರಿಂದ ದೇಹಾರೋಗ್ಯಕ್ಕೆ ಅನುಕೂಲವಾಗುತ್ತದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಬಸವರಾಜ ಮಾತನಾಡಿ, ಹಸಿರು ಭೂಮಿ ಸದುದ್ದೇಶದ ಸಫಲತೆಗಾಗಿ ಸೈಕಲ್ ಸವಾರಿ ಅವಶ್ಯವಿದೆ. “ಆರೋಗ್ಯಕ್ಕಾಗಿ ಸೈಕಲ್” ಈ ವರ್ಷದ ಘೋಷಣೆಯಾಗಿದ್ದು, ಯಾವುದೇ ಕಾಯಿಲೆಗಳು ಬಾಧಿಸುವ ಮುನ್ನವೇ ಪ್ರಾರಂಭಿಕ ಹಂತದಲ್ಲಿ ತಡೆಗಟ್ಟುವ ಎಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬ ಸದುದ್ದೇಶದಿಂದ ಈ ಘೋಷವಾಕ್ಯದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಸಿಕಲ್ ಸವಾರಿ ಕೈಗೊಂಡು ಜಾಗೃತಿ ಮೂಡಿಸಿದರು.
ಇದನ್ನೂ ಓದಿ: World Bank President : ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ ಅಧಿಕಾರ ಸ್ವೀಕಾರ
ಈ ಸಂದರ್ಭದಲ್ಲಿ ಆರ್‌ಸಿಎಚ್ ಅಧಿಕಾರಿ ಜಂಬಯ್ಯ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ಶಂಕರ ನಾಯ್ಕ, ಸಮುದಾಯ ಆರೋಗ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.