Site icon Vistara News

Vijayanagara News : ವಿಶ್ವ ತಂಬಾಕು ರಹಿತ ದಿನಾಚರಣೆ; ಜಾಗೃತಿ ಕಾರ್ಯಕ್ರಮ

Hospet Senior Chief Justice Kishan Madalaga spoke at an awareness program

ಹೊಸಪೇಟೆ: ತಂಬಾಕು ಉತ್ಪನ್ನಗಳನ್ನು (Tobacco products) ಬಳಸಿ ಆರೋಗ್ಯ (Health) ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಲು ರಾಷ್ಟ್ರಮಟ್ಟದಲ್ಲಿ ಜಾಗೃತಿ (Awareness) ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಕಾರಾಗೃಹದಿಂದ ಹೊರಬಂದ ನಂತರ ತಾವುಗಳು ಸಹ ಸಮಾಜಮುಖಿಯಾಗಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಹಿರಿಯ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಕಿಶನ್ ಮಾಡಲಗಿ ಅವರು ಕೈದಿಗಳಿಗೆ ತಿಳಿಸಿದರು.

ಹೊಸಪೇಟೆಯ ತಾಲೂಕು ಕಾರಾಗೃಹ ಮತ್ತು ಸುಧಾರಣ ಸೇವೆ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆರೋಗ್ಯ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಉಪಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Odisha Train Accident : ರಾತ್ರಿಯಿಡೀ ಕ್ಯೂ ನಿಂತು ರಕ್ತ ದಾನ ಮಾಡಿ ಮಾನವೀಯತೆ ಮೆರೆದ ಜನ

ಕಾರಾಗೃಹ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಬಳಕೆ ಕಟ್ಟುನಿಟ್ಟಾಗಿ ನಿಷೇಧವಿದೆ. ಈ ಹಿಂದೆ ತಂಬಾಕು ಬಳಸುವವರು ಆರೋಗ್ಯ ಸಮಲೋಚನೆ ನಂತರ ವ್ಯಸನವನ್ನು ತ್ಯಜಿಸಿದ್ದಾರೆ. ತಾವುಗಳು ಕಾರಾಗೃಹದಿಂದ ಬಿಡುಗಡೆ ಹೊಂದಿದ ನಂತರ ಸಮಾಜಮುಖಿಯಾಗಿ ಇತರರಿಗೂ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ವೈದ್ಯಾಧಿಕಾರಿ ಡಾ.ಸೋಮಶೇಖರ್, ತಂಬಾಕು ಬಳಕೆಯ ದುಷ್ಪಾರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವ್ಯಕ್ತಿಯೊಬ್ಬ ಮಾನಸಿಕ ಖಿನ್ನತೆಗೆ ಒಳಗಾದಾಗ ದುಶ್ಚಟಗಳಿಗೆ ದಾಸನಾಗುವ ಸಂಭವ ಇರುತ್ತದೆ. ಸ್ವಯಂ ಜಾಗೃತಿಯಿಂದ ವ್ಯಸನ ಮುಕ್ತವಾಗಬಹುದು, ಪ್ರಾರಂಭಿಕವಾಗಿ ವ್ಯಸನವನ್ನು ತ್ಯಜಿಸುವುದು ಕಷ್ಟವಾಗುತ್ತದೆ. ಇಂತವರಿಗಾಗಿ ಆರೋಗ್ಯ ಇಲಾಖೆಯಿಂದ ವ್ಯಸನಮುಕ್ತ ಕೇಂದ್ರ ಸ್ಥಾಪಿಸಿ ಆಪ್ತ ಸಮಾಲೋಚನೆ ಕೈಗೊಳ್ಳಲಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಉಪಕಾರಾಗೃಹದ ಅಧೀಕ್ಷಕ ಎಂ.ಎಚ್.ಕಲಾದಗಿ ವಹಿಸಿದ್ದರು.

ಇದನ್ನೂ ಓದಿ: Love Case: ಹಾನಗಲ್‌ ಪೊಲೀಸರ ಟಾರ್ಚರ್‌ಗೆ ಯುವಕ ಬಲಿ?; ಅಣ್ಣನ ಪ್ರೀತಿ ಇವನ ಜೀವಕ್ಕೆ ಮುಳುವಾಯಿತೇ?

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಬಸವರಾಜು, ವಕೀಲರ ಸಂಘದ ಎ.ಕರುಣಾನಿಧಿ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಮಾರೇಶ ಜಿ. ಹಾಗೂ ಅಂಜಲಿ ಬೆಳಗಲ್ ಇದ್ದರು.

Exit mobile version