Site icon Vistara News

Vijayanagara News : ಉತ್ತಮ ಆರೋಗ್ಯ, ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ: ಡಾ. ಎಸ್‌. ಬಿ.ಹಂದ್ರಾಳ

Yoga Camp by Patanjali Yoga Committee at vijayanagara

ಹೊಸಪೇಟೆ: ಉತ್ತಮ ಆರೋಗ್ಯ (Good Health) ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ (Yoga) ಉತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯ ಡಾ. ಎಸ್‌. ಬಿ.ಹಂದ್ರಾಳ ತಿಳಿಸಿದರು.

ನಗರದ ನೆಹರೂ ಕಾಲೊನಿಯ ಬಲ್ಡೋಟಾ ಪಾರ್ಕ್‌ನಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ವಿಶೇಷ ಯೋಗ ಶಿಬಿರ ಹಾಗೂ ಒತ್ತಡ ರಹಿತ ಜೀವನ ಶೈಲಿಗಾಗಿ ಯೋಗ ಕುರಿತು ಅವರು ಮಾತನಾಡಿದರು.

ಇದನ್ನೂ ಓದಿ: ಕೆಲಸ ಕೊಡ್ತೇನೆ ಎಂದ ಆನ್​ಲೈನ್ ವಂಚಕನಿಗೇ ದಾರಿ ತಪ್ಪಿಸಿದ ಯುವತಿ; ಸಾಯುವ ಆಟ, ಸತ್ತೇ ಹೋದಳು ಎಂದ ಅಮ್ಮ!

ಯೋಗ ಮತ್ತು ಪ್ರಾಣಾಯಾಮವು ನಮ್ಮ ಒತ್ತಡ ಮತ್ತು ಆತಂಕವನ್ನು ದೂರಮಾಡುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದರು.

ಸೂರ್ಯ ನಮಸ್ಕಾರದ 12 ಭಂಗಿಗಳು ನಮ್ಮ ಸಂಪೂರ್ಣ ದೇಹವನ್ನು ಕ್ರಿಯಾಶೀಲಗೊಳಿಸುವುದರ ಜತೆಗೆ ಒತ್ತಡ ರಹಿತ ಜೀವನಕ್ಕೆ ನಮ್ಮ ದೇಹವನ್ನು ಸಶಕ್ತಗೊಳಿಸಲಿದ್ದು, ಅವುಗಳ ನಿರಂತರ ಅಭ್ಯಾಸದ ಮೂಲಕ ದೇಹ ಸಮತೋಲನ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.

ವಿಶ್ವ ಯೋಗದಿನದ ಪೂರ್ವಭಾವಿ ಸಭೆ

ಇದೇ ಜೂನ್ 21ರಂದು ವಿಶ್ವ ಯೋಗ ದಿನ ವಿಶ್ವದಾದ್ಯಂತ ನಡೆಯುವಂತೆ ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಸಭೆ ನಿರ್ಣಯಿಸಿತು. ಜಿಲ್ಲಾಡಳಿತ, ಆಯುಷ್‌ ಇಲಾಖೆಗಳೊಂದಿಗೆ ಚರ್ಚಿಸಿ ಕಳೆದ ಬಾರಿಯಂತೆ ಆಚರಿಸಲು ಒಂದು ವೇಳೆ ಇಲ್ಲವಾದರೆ ಪತಂಜಲಿ ಯೋಗ ಸಮಿತಿ ಸ್ವತಂತ್ರವಾಗಿ ಅಥವಾ ಹಂಪಿ ವಿಶ್ವವಿದ್ಯಾಲಯದ ಯೋಗ ಕೇಂದ್ರದ ಸಹಯೋಗದಲ್ಲಿಯೇ ಆಗಲಿ ಎಲ್ಲರೊಂದಿಗೆ ಅದ್ಧೂರಿಯಾಗಿ ಆಚರಿಸಲು ತಿರ್ಮಾನಿಸಿದರು.

ಇದನ್ನೂ ಓದಿ: Monsoon Festivals: ಧೋ ಎಂದು ಸುರಿಯುವ ಮಳೆಯ ನಡುವೆ ಮನಸೆಳೆವ ಹಬ್ಬಗಳು!

ಈ ಸಂದರ್ಭದಲ್ಲಿ ಸಮಿತಿಯ ಯುವ ಪ್ರಭಾರಿ ಕಿರಣ್ , ಸಂಜಯಸ್ವಾಮಿ, ನಾಗಪ್ಪ, ಡಾ.ಎಫ್.ಟಿ. ಹಳ್ಳಿಕೇರಿ, ಉಮಾ ವಿಶ್ವನಾಥ, ಚಂದ್ರಿಕಾ ಶ್ರೀರಾಮ, ಮಂಗಳಾ, ಎಚ್. ಶ್ರೀನಿವಾಸರಾವ್, ಶ್ರೀನಿವಾಸ ಮಂಚಿಕಂಟಿ, ಡಾ.ಮಲ್ಲಿಕಾರ್ಜುನ, ಭೂಪಾಳ ರಾಘವೇಂದ್ರ ಶೆಟ್ಟಿ ಸೇರಿದಂತೆ ಹೊಸಪೇಟೆಯ ವಿವಿಧ ಕೇಂದ್ರಗಳ ಸಂಚಾಲಕರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version