ಹರಪನಹಳ್ಳಿ: ತಾಲೂಕಿನ ಅರಸೀಕೆರೆ (Araseekere) ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಗ್ರಾಪಂ ಗಳಿಗೆ ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವಪ್ರಭು ದಿಢೀರ್ ಭೇಟಿ (visit) ನೀಡಿ, ಪರಿಶೀಲನೆ (inspected) ನಡೆಸಿದರು.
ಕಲ್ಯಾಣ ಕರ್ನಾಟಕ, ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಅನುಷ್ಠಾನಗೊಳಿಸುವ ಕೌಶಲ್ಯ ಕೇಂದ್ರವನ್ನು ಹಾಗೂ ಸೌಲಭ್ಯ ಪಡೆದಿರುವ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ: Costly Mango: ಟೊಮ್ಯಾಟೊಗೊಂದು ಕಾಲ, ಮಾವಿಗೊಂದು ಕಾಲ; ಈ ರೈತ ಬೆಳೆಯುವ ಕೆ.ಜಿ ಮಾವಿಗೆ ಇಷ್ಟು ಲಕ್ಷ ರೂ.!
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಲು ಸೂಚನೆ ನೀಡಿದರು. ಕಸವಿಲೇವಾರಿ ಘಟಕದ ಮಾಹಿತಿ ಪಡೆದು ಸ್ವಚ್ಛ ಗ್ರಾಮವನ್ನಾಗಿಸಲು ಹಾಗೂ ಕುಡಿಯುವ ನೀರಿನ ಬಗ್ಗೆ ಯಾವುದೇ ತೊಂದರೆ ಬಾರದಂತೆ ಮತ್ತು ಜನರಿಗೆ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕವನ್ನು ಸರಿಯಾಗಿಟ್ಟುಕೊಳ್ಳಲು ಅವರು ಸೂಚಿಸಿದರು.
ಮತ್ತಿಹಳ್ಳಿ, ಸಾಸ್ವೆಹಳ್ಳಿ, ಕಡಬಗೆರೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ: Success Story: ತರಕಾರಿ ಮಾರುತ್ತಿದ್ದ ವ್ಯಕ್ತಿ ಈಗ ಕಂಪನಿ ಸಿಇಒ; ಇದು ದಿಲ್’ಖುಷ್’ ಆಗುವ ಕತೆ
ಈ ಸಂದರ್ಭದಲ್ಲಿ ಅರಸೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ. ರೇಖಾ ಕೊಟ್ರೇಶ್, ಅಂಜಿನಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.