Site icon Vistara News

Vijayapura Earthquake | ಗುಮ್ಮಟ ನಗರಿಯಲ್ಲಿ ಮತ್ತೆ ಭೂಕಂಪನ ಗುಮ್ಮ; ಭಯಭೀತಿಯಲ್ಲಿ ಸಾರ್ವಜನಿಕರು

Earthquake In Karnataka 

ವಿಜಯಪುರ: ಕಳೆದ ಒಂದು ತಿಂಗಳಿಂದ ಭೂಕಂಪನದ ಅನುಭವ (Vijayapura Earthquake) ಇಲ್ಲದೆ ನೆಮ್ಮದಿಯಾಗಿದ್ದ ಜಿಲ್ಲೆಯ‌ ಜನತೆ ಕಳೆದ ತಡರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಮತ್ತೆ ಭೂಕಂಪನದ ಅನುಭವಾಗಿದ್ದು, ಭಯಭೀತರಾಗಿದ್ದಾರೆ. ಆದರೆ, ತಜ್ಞರು ಈ ಬಗ್ಗೆ ಭಯ ಬೇಡ ಎಂದೇ ಹೇಳುತ್ತಿದ್ದಾರೆ.

ಕಳೆದ‌ ಮೂರು ದಿನಗಳಿಂದ ನಿರಂತರ ಮಳೆಗೆ ಹೈರಾಣಾಗಿದ್ದ ಜನರಿಗೆ ಬುಧವಾರ ರಾತ್ರಿ 11.42ಕ್ಕೆ ಹಾಗೂ ಗುರುವಾರ ಬೆಳಗ್ಗೆ 6.19ಕ್ಕೆ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ನಗರದ ರೈಲ್ವೆ ಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ಭೂ ಕಂಪನದ ಅನುಭವವಾಗಿದೆ.

ಭೂ ಕಂಪನದಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಮನೆ ಹೊರಗಡೆ ಬಂದರೆ ಮಳೆ ಕಾಟ, ಮನೆ ಒಳಗೆ ವಸ್ತುಗಳು ಅಲುಗಾಡಿದ ರೀತಿ ಜನರಿಗೆ ಗೋಚರವಾಗುತ್ತಿದ್ದು, ಏನು ಮಾಡಬೇಕು ಎಂದು ತಿಳಿಯದೇ ರಾತ್ರಿ ಇಡೀ ನಿದ್ದೆಇಲ್ಲದೆ ಕಳೆಯಲಾಗಿದೆ ಎಂದು ಭೂಕಂಪನ ಪೀಡಿತ ಪ್ರದೇಶಗಳ ಜನತೆ ಪ್ರತಿಕ್ರಿಯೆ ನೀಡಿದ್ದಾರೆ.

ಪದೇಪದೆ ಆಗುತ್ತಿರುವ ಭೂಕಂಪನದಿಂದಾಗಿ ಜಿಲ್ಲೆಯ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಈ ಬಗ್ಗೆ ಭೂಮಾಪನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಹ ಪರಿಶೀಲನೆ ನಡೆಸುತ್ತಿದೆ. ಭೂಕಂಪನದ ಅನುಭವವಾಗುತ್ತಿದ್ದರೂ ತಜ್ಞರು ಮಾತ್ರ ಇದು ಯಾವುದೇ ಜೀವ ಹಾನಿಯಾಗುವ ಮಟ್ಟಕ್ಕೆ ಇಲ್ಲ. ಅಂರ್ತಜಲ ಮಟ್ಟ ಹೆಚ್ಚಾಗಿರುವ ಕಾರಣ ಸ್ವಲ್ಪ ಪ್ರಮಾಣದಲ್ಲಿ ಈ ರೀತಿ ಭೂಮಿ ಕಂಪಿಸುವುದು ಸಹಜ ಎನ್ನುತ್ತಾರೆ.

ಇದನ್ನೂ ಓದಿ | Vijayapura Earthquake | ವಿಜಯಪುರದಲ್ಲಿ ಸರಣಿ ಭೂಕಂಪನ; ತಜ್ಞರ ಭೇಟಿ, ಭಯಗೊಳ್ಳದಂತೆ ಸಲಹೆ

Exit mobile version