Site icon Vistara News

ಇಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿವಿ ಘಟಿಕೋತ್ಸವ, ರಾಜ್ಯಪಾಲ ಗೆಹ್ಲೋಟ್‌ ಭಾಗಿ

ತಾವರ್ ಚಂದ್ ಗೆಹ್ಲೋಟ್

ವಿಜಯಪುರ : ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಎರಡು ದಿನಗಳ ಕಾಲ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ಬಾಗಲಕೋಟೆಯಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ನಡೆಯಲಿದ್ದು, ಇದರಲ್ಲಿ ಪಾಲ್ಗೊಡು ರಾಜ್ಯಪಾಲರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಮಂಗಳವಾರ ತಡರಾತ್ರಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿ ಗೆಹ್ಲೋಟ್  ಜಲಾಶಯ ಮತ್ತು ಉದ್ಯಾನವನ್ನು ವೀಕ್ಷಣೆ ಮಾಡಿದರು. ಮೊಘಲ್ ಗಾರ್ಡನ್, ಫ್ರೆಂಚ್ ಗಾರ್ಡನ್ ನಲ್ಲಿ ಕೆಬಿಜೆಎನ್ ಎಲ್ ವತಿಯಿಂದ ನಿರ್ಮಿಸಲಾದ ಲೇಸರ್ ಶೋ ಹಾಗೂ  ಬಣ್ಣ ಬಣ್ಣದ ನೃತ್ಯ ಕಾರಂಜಿಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ | ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕೆ ಛೀಮಾರಿ ಹಾಕಿದ ಮುಸ್ಲಿಂ ವಿದ್ವಾಂಸನ ವಿರುದ್ಧ ಕೇರಳ ರಾಜ್ಯಪಾಲ ಗರಂ

ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಎಸಿಗಳು, ಜಿ.ಪಂ. ಸಿಇಓಗಳು ಎಸ್ಪಿಗಳು, ಸಿಇ ಸುರೇಶ್, ಎಸ್ ಇ ಬಸವರಾಜ್, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಇತರೇ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ಬುಧವಾರ ಬೆಳಗ್ಗೆ ಆಲಮಟ್ಟಿಯಿಂದ ಬಾಗಲಕೋಟೆ ಜಿಲ್ಲೆಯಲ್ಲಿನ ಬಸವಣ್ಣನವರ ಐಕ್ಯಮಂಟಪಕ್ಕೆ ರಾಜ್ಯಪಾಲರು ಭೇಟಿ ನೀಡಲಿದ್ದಾರೆ. ನಂತರ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ | ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತ ಜಾರಿ

Exit mobile version