ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸಬೇಕು ಎಂದರು ಒತ್ತಾಯಿಸಿ ರೈತರು ಕಳೆದ 48 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಶಾಲಾ ಮಕ್ಕಳೂ ಸೋಮವಾರ ಬೆಂಬಲಿಸಿ ಭಾಗವಹಿಸಿದರು.
ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಹೋರಾಟ ನಡೆಯುತ್ತಿದೆ. ನೀರಾವರಿ ಹೋರಾಟಕ್ಕೆ ತಾವೂ ಬಂದಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಹಿರಿಯರ ಜತೆಗೆ ನಾವೂ ಕೈಜೋಡಿಸುತ್ತೇವೆ ಎಂದು ಮಕ್ಕಳು ಮಾತನಾಡಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ್ ಕೋಚಬಾಳ ಮಾತನಾಡಿ, ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿದ್ದರು. ಕಳೆದ 60 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ನೀರು ಸರಬರಾಜು ಮಾಡಲು ಹೊಸ 8 ಯಂತ್ರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಕ್ಷೇತ್ರದ ಶಾಸಕರು 3-4 ತಿಂಗಳಿಂದ ಹೇಳುತ್ತಾರೆ. ಆದರೆ ಖರೀದಿ ಮಾಡಿ ಮೋಟರ್ ಅಳವಡಿಸಿ ಕಾಲುವೆಗೆ ನೀರು ಹರಿಸುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.
ಇದನ್ನು ಓದಿ | 25ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪುರ ತಾಲೂಕು ಹೋರಾಟ: ಬೆಂಗಳೂರಲ್ಲಿ ಇಂದು ಸಿಎಂ ಭೇಟಿ