Site icon Vistara News

ಮದ್ಯ ಸೇವಿಸಿ ಈಜಲು ಹೋಗಿ ನೀರಿನ ಮಧ್ಯೇಯೇ ಪ್ರಾಣ ಬಿಟ್ಟ

ವಿಜಯಪುರ: ಸ್ನೇಹಿತರ ಪ್ರಚೋದನೆಗೆ ಒಳಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜುವ ಹುಚ್ಚು ಸಾಹಸ ಮಾಡಲು ಹೋಗಿ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡ ಘಟನೆ ದ್ಯಾಬೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಪ್ರಕಾಶ್ ಮೋರೆ (45) ಮೃತಪಟ್ಟವ. ಭಾನುವಾರ ಮಧ್ಯಾಹ್ನ ಸ್ನೇಹಿತರ ಜತೆಗೆ ಪ್ರಕಾಶ್‌ ಪಾರ್ಟಿ ಮಾಡಿದ್ದ. ಮದ್ಯ ಸೇವಿಸಿದ ಪ್ರಕಾಶ್‌ ಸ್ನೇಹಿತರ ಜತೆಗೆ ಕೆರೆ ಬಳಿ ಬಂದಿದ್ದ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆರೆಯನ್ನು ಈಜಿ ದಡ ಸೇರಿದರೆ ₹20 ಸಾವಿರ ನೀಡುವುದಾಗಿ ಸ್ನೇಹಿತರು ಬೆಟ್ಟಿಂಗ್‌ ಕಟ್ಟಿದ್ದರು.
20 ಸಾವಿರ ಬೆಟ್ಟಿಂಗ್‌ ಆಸೆಗಾಗಿ ನೀರಿಗೆ ಪ್ರಕಾಶ್‌ ಮೋರೆ ಜಿಗಿದಿದ್ದು, ಕುಡಿದ ಮತ್ತಿನಲ್ಲಿ ಹಾಗೂ ಸರಿಯಾಗಿ ದಡ ಗುರುತಿಸಲಾಗದೆ ಕೈ ಸೋತು ನೀರು ಪಾಲಾಗಿದ್ದಾನೆ.

ಇದನ್ನೂ ಓದಿ| ತಿಕೋಟದಲ್ಲಿ ದಾಯಾದಿ ಸಹೋದರರ ಮಧ್ಯೆ ಜಗಳ: ಪರಸ್ಪರ ಕಲ್ಲು ತೂರಾಟ

ನೀರು ಪಾಲಾಗುತ್ತಿದ್ದಂತೆ ಸ್ಥಳದಿಂದ ಸ್ನೇಹಿತರು ಪರಾರಿಯಾಗಿದ್ದಾರೆ. ಅಗ್ನಿಶಾಮಕ ದಳ ಕೆರೆಯಿಂದ ಶವ ಹೊರತೆಗೆದಿದೆ. ಪ್ರಕಾಶ್‌ ಸ್ನೇಹಿತರಾದ ಗಣಪತಿ ಧನವಡೆ, ಸಂತೋಷ ಕಂಬಾರ, ಬಾಹುಸಾಬ್ ಸಿಂದೆ, ಬಸವರಾಜ‌ ನಾಟಿಕಾರ ಎಂಬುವವರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಯುತ್ತಿದೆ.

Exit mobile version