ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಕಂಪಿಸುತ್ತಿರುವ ಭೂಮಿಯು ಸೋಮವಾರ ಮೂರು ಬಾರಿ ಕಂಪಿಸಿದ್ದು, ಜನರು ಆತಂಕ್ಕೊಳಗಾದರು.
ಸೋಮವಾರ ಸಂಜೆ ಸಂಭವಿಸಿದ ಕಂಪನವು ರಿಕ್ಟರ್ ಮಾಪನದಲ್ಲಿ 2.6 ರಷ್ಟಿತ್ತು. ನಂತರ ರಾತ್ರಿ 9.23ಕ್ಕೆ ಹಾಗೂ ರಾತ್ರಿ 11.04 ಕ್ಕೆ ಭೂಕಂಪನ ಅನುಭವವಾಗಿದೆ. ಮೇಲಿಂದ ಮೇಲೆ ಭೂಕಂಪನವಾಗುತ್ತಿರುವುದಕ್ಕೆ ಜನರಲ್ಲಿ ಆತಂಕ ಉಂಟಾಗಿದೆ. ಭೂಕಂಪನ ಆಗುತ್ತಿರುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಶನಿವಾರ ಹಾಗೂ ಭಾನುವಾರವೂ ವಿಜಯಪುರದಲ್ಲಿ ಭೂಕಂಪನವಾಗಿತ್ತು. ಇದುವರೆಗೆ ಸುಮಾರು ೨೦ ಬಾರಿ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಹೀಗಾಗಿ ಜನರು ಆತಂಕಗೊಂಡಿದ್ದಾರೆ.
ಇದನ್ನೂ ಓದಿ | ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ