Site icon Vistara News

Kodekal Basaveshwara Karnika: ಈ ವರ್ಷ ಜಗತ್ತಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳುವುದು ಬಹಳ; ಕೊಡೆಕಲ್ ಬಸವೇಶ್ವರ ಕಾರ್ಣಿಕ

Kodekal Basaveshwara Karnika

ವಿಜಯಪುರ: ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದ ಶರಣ ಶಿವಶಂಕರ ದಿಂಡವಾರ ತೋಟದಲ್ಲಿ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ( (Kodekal Basaveshwara Karnika) ) ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದಾರೆ. ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿ ಇಲ್ಲ. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳಿರುತ್ತವೆ. ವಿಶ್ವದಲ್ಲಿ ನಮ್ಮ ದೇಶ ಹೆಸರು ತರುತ್ತದೆ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೆ ಕೇಳುವುದು ಬಹಳವಾಗುತ್ತದೆ. ಸುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯವಾಗುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.

ಕೊಡೆಕಲ್ ಬಸವೇಶ್ವರ ದೇವಸ್ಥಾನದ ಜಾತ್ರೆ ಪ್ರಯುಕ್ತ ಪುರಾಣ ಮುಕ್ತಾಯ, ಗ್ರಂಥ ಬಿಡುಗಡೆ ಹಾಗೂ ಕಾರ್ಣಿಕ ನುಡಿಗಳ ಕಾರ್ಯಕ್ರಮ ಶುಕ್ರವಾರ ನಡೆಯಿತು. ಈ ವೇಳೆ ದೇವಸ್ಥಾನದ ಮುಖ್ಯಗುರು ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಕ್ರೋಧಿನಾಮ ಸಂವತ್ಸರದ ಕಾಲಮಾನ ಪ್ರಸ್ತುತ ಕಾರ್ಣಿಕ ನುಡಿಗಳನ್ನು ಹೇಳಿದರು.

ಈ ಬಾರಿ ಚೆನ್ನಾಗಿ ಆಗುತ್ತದೆ. ದಕ್ಷಿಣ ಭಾಗದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆಯಾಗುತ್ತದೆ. ವಾತಾವರಣದಲ್ಲಿ ವ್ಯತ್ಯಾಸವಾಗಿ ಗಾಳಿಯ ರಭಸ ಹೆಚ್ಚಾಗಿದೆ. ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ ಎಂದು ದಿಂಡವಾರ ಶರಣರು ಕಾರ್ಣಿಕ ನುಡಿದಿದ್ದಾರೆ.

ಇದನ್ನೂ ಓದಿ | Lok Sabha Election 2024: ಕಾಂಗ್ರೆಸ್‌ ಕೊಟ್ಟ ಚೆಂಬುಗಳ ಪಟ್ಟಿ ಕೊಟ್ಟ ಅಶೋಕ್‌; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

ಕೊಡೆಕಲ್ ಬಸವೇಶ್ವರ ದೇವಾಲಯದಿಂದ ನಾನಾ ವಾದ್ಯಗಳೊಂದಿಗೆ ಕೊಡೆಕಲ್ ಬಸವೇಶ್ವರರ ವಚನ ಓದುತ್ತ ಅದ್ಧೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ಇನ್ನೂ ಈ ವೇಳೆ ಚಿತ್ರದುರ್ಗದ ಹಾಲೇಶಪ್ಪ ಪಟೀಲ್, ಸಂಸ್ಕೃತ ಶಿಕ್ಷಕಿ ಹೇಮಾವತಿ, ಅಮಿವೇಶ ದಿಂಡವಾರ, ಪಂಚಾಕ್ಷರಿ ದಿಂಡವಾರ, ಷಣ್ಮುಖಪ್ಪ ಪಟ್ಟಣಶೆಟ್ಟಿ, ಜಿ.ಕೆ.ಪಟ್ಟಣದ, ಗುರಣ್ಣ ಬಣ್ಣದ, ರಾಮಗೊಂಡ ಗುದ್ದಿ, ಜಿ.ಬಿ.ಬಾಗೇವಾಡಿ, ಮಲ್ಲಿಕಾರ್ಜುನ ಹತ್ತಿ, ಪಾಯಣ್ಯ ಪಡಸಲಗಿ, ದ್ರಾಕ್ಷಾಯಿಣಿ ಪಟ್ಟಣಶೆಟ್ಟಿ, ಸಾವಿತ್ರಿ ಗಿರಡ, ಲಲಿತಾ ಡೋಣೂರ ಮತ್ತಿತರರಿದ್ದರು.

Exit mobile version