Site icon Vistara News

ಬಾಣಂತಿಯರ ಸಂಕಷ್ಟಕ್ಕೆ ಮೂಲಸೌಕರ್ಯ ಕೊರತೆ ಕಾರಣ: ವರದಿಯಲ್ಲಿ ಉಲ್ಲೇಖ

ಮೂಲಸೌಕರ್ಯ ಕೊರತೆ

ವಿಜಯಪುರ: ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್‌ಗೆ ಒಳಗಾದ ಮೂವತ್ತು ಮಹಿಳೆಯರು ಸಂಕಷ್ಟಕ್ಕೆ ಒಳಗಾದ ಪ್ರಕರಣದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ನೇತೃತ್ವದ ತನಿಖಾ ಸಮಿತಿ ವರದಿ ಸಲ್ಲಿಸಿದೆ. ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆ ಈ ಸಂಕಷ್ಟಕ್ಕೆ ಕಾರಣ ಎಂದು ವರದಿ ಬೊಟ್ಟುಮಾಡಿ ತೋರಿಸಿದೆ.

ಏಪ್ರೀಲ್ 30 ರಿಂದ ಮೇ 13ರ ವರೆಗೆ 245 ಸಿಜೆರಿಯನ್ ಆಪರೇಶನ್ ನಡೆದಿತ್ತು. ಇವರಲ್ಲಿ ಸಿಜೆರಿಯನ್ ಆದ 30ಕ್ಕೂ ಅಧಿಕ ಬಾಣಂತಿಯರಲ್ಲಿ ಸೋಂಕು ಕಾಣಿಸಿಕೊಂಡು, ಹೊಲಿಗೆ ಕಿತ್ತು ಬಂದಿದ್ದವು. ಬಾಣಂತಿಯರು ಪುನಃ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಪ್ರಕರಣ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದರು. ತನಿಖೆಗಾಗಿ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ನಾಲ್ಕು ದಿನಗಳ ಕಾಲ ಇಡೀ ಪ್ರಕರಣದ ಕೂಲಂಕಷ ತನಿಖೆ ನಡೆಸಿದ ತಂಡ ಸಮಸ್ಯೆಗೀಡಾಗಿದ್ದ ಇದೀಗ ತನ್ನ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ.

ಇದನ್ನೂ ಓದಿ | ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

ಎಸಿ ಬಲರಾಮ ಲಮಾಣಿ ನೇತೃತ್ವದ ತಂಡದಿಂದ ವಿಚಾರಣೆ ಮುಕ್ತಾಯವಾಗಿದ್ದು, ಮಂಗಳವಾರ ಸಂಜೆ ತನಿಖಾ ವರದಿ ಸಲ್ಲಿಕೆ ಮಾಡಬೇಕಿತ್ತು. ಇದೀಗ ಶನಿವಾರ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

ಆಸ್ಪತ್ರೆಯಲ್ಲಿ ಒಂದೇ ಆಪರೇಷನ್ ಥಿಯೇಟರ್ ಇದೆ. ಕೆಲ ತಜ್ಞ ವೈದ್ಯರ ಕೊರತೆ ಇದೆ. ಆಪರೇಷನ್ ಕೊಠಡಿಯನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು ಸಹ ಬಾಣಂತಿಯರಲ್ಲಿ ಸೋಂಕು ಕಾಣಿಸಿಕೊಳ್ಳಲು ಒಂದು ಕಾರಣ ಎಂದು ವರದಿಯಲ್ಲಿ ತಿಳಿಸಿದೆ. ಇಂತಹ ಸಮಸ್ಯೆ ಭವಿಷ್ಯದಲ್ಲಿ ಎದುರಾಗಬಾರದು ಎಂದರೆ ಆಸ್ಪತ್ರೆಗೆ ಇನ್ನೂ ಹೆಚ್ಚಿನ ತಜ್ಞ ವೈದ್ಯರ ನೇಮಕಾತಿ ಆಗಬೇಕು. ಇನ್ನೊಂದು ಆಪರೇಷನ್ ಕೊಠಡಿ ಬೇಕು ಮತ್ತು ಅಗತ್ಯ ನರ್ಸ್‌ಗಳ ಅವಶ್ಯಕತೆ ಬಹಳ ಇದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಅವರಿಗೆ ಬಲರಾಮ ಲಮಾಣಿ ಅವರ ನೇತೃತ್ವದ ತಂಡ ಸಲ್ಲಿಸಿದ ವರದಿ ಸಲ್ಲಿಸಿದೆ.

ವೈದ್ಯರ ನಿರ್ಲಕ್ಷ್ಯ ದಿಂದ ಬಾಣಂತಿಯರು ಯಾತನೆ ಅನುಭವಿಸಿದ್ದಾರೆ. ಸರ್ಕಾರವು ಮೂಲಸೌಕರ್ಯ ಕೊರತೆ ಈ ಸಮಸ್ಯೆಗೆ ಕಾರಣ ಎನ್ನುವುದನ್ನು ಸರ್ಕಾರಿ ಅಧಿಕಾರಿಗಳ ವರದಿಯೇ ತಿಳಿಸಿದೆ. ಇದ್ದಕ್ಕೆ ಸರ್ಕಾರ ಆದಷ್ಟು ಶೀಘ್ರವೇ ಸ್ಪಂದಿಸಿ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ| ಕಣ್ಣು ಆಪರೇಷನ್‌ ಎಂದು ಹೇಳಿದ, ಕಣ್ಣಿಗೆ ಮಣ್ಣೆರಚಿ ₹5 ಲಕ್ಷ ದೋಚಿದ

Exit mobile version