Site icon Vistara News

Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ಬರಬೇಡಿ ಎಂದ ಪೇಜಾವರ ಶ್ರೀ

Ram Mandir

ವಿಜಯಪುರ: ಈ ಬಾರಿ ಶ್ರೀ ರಾಮ ನವಮಿಯಂದು ಅಯೋಧ್ಯೆ ರಾಮ ಮಂದಿರಕ್ಕೆ ಬರಬೇಡಿ ಎಂದು ಭಕ್ತರಲ್ಲಿ ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ. ರಾಮ ನವಮಿ (ಏ.17) ಹಿನ್ನೆಲೆಯಲ್ಲಿ ಅಯೋಧ್ಯೆಗೆ ಕೋಟ್ಯಂತರ ಭಕ್ತರು ಆಗಮಿಸುವುದರಿಂದ ಜನದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ತಮ್ಮ ತಮ್ಮ ಊರುಗಳಲ್ಲೇ ಭಕ್ತರು ರಾಮ ನವಮಿ ಆಚರಿಸಬೇಕು ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

ನಗರದ ಕೃಷ್ಣ ಮಠದಲ್ಲಿ ಮಾತನಾಡಿದ ಅವರು, ರಾಮ ನವಮಿಗೆ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗಲಿದೆ. ಹೀಗಾಗಿ ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮ ನವಮಿ ಆಚರಿಸಿ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

ಈಗಲೇ ಪ್ರತಿ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ರಾಮನವಮಿಗೆ ಮತ್ತಷ್ಟು ಭಕ್ತರು ಆಗಮಿಸಿದಲ್ಲಿ ತೊಂದರೆ ಉಂಟಾಗಲಿದೆ. ಅದ್ದರಿಂದ ನಿಮ್ಮ ಊರುಗಳು, ಮಂದಿರಗಳಲ್ಲೆ ರಾಮ ನವಮಿ ಆಚರಿಸಿ ಎಂದು ಪೇಜಾವರ ಶ್ರೀಗಳು ಕೋರಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

Ugadi 2024: ವೀಕೆಂಡ್‌ನಲ್ಲಿ ಶುರುವಾದ ಯುಗಾದಿ ಶಾಪಿಂಗ್‌; ದುಬಾರಿ ಬೆಲೆಯಲ್ಲೂ ಜೋರಾದ ಖರೀದಿ

ಬೆಂಗಳೂರು: ಯುಗಾದಿ ಹಬ್ಬ (Ugadi 2024) ಹಿನ್ನೆಲೆಯಲ್ಲಿ ಹೂ-ಹಣ್ಣು ಖರೀದಿಯ ಭರಾಟೆ ಜೋರಾಗಿದೆ. ಯುಗಾದಿ ಹಬ್ಬ ಹಿಂದೂಗಳ ಹೊಸ ವರ್ಷದ ದೊಡ್ಡ ಹಬ್ಬ. ಮನೆಯವರೆಲ್ಲಾ ಹೊಸ ಉಡುಗೆತೊಡುಗೆ ಧರಿಸಿ ಹಬ್ಬ ಆಚರಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಮಾತ್ರವಲ್ಲ ಯುಗಾದಿಗೆ ರುಚಿ ರುಚಿಯಾದ ಆಹಾರದೊಂದಿಗೆ ಬೇವು-ಬೆಲ್ಲವನ್ನು ಸವಿಯುತ್ತಾರೆ.

ನಾಡಿನೆಲ್ಲೆಡೆ ಚಾಂದ್ರಮಾನ ಯುಗಾದಿ ಹಬ್ಬದ ಸಂಭ್ರಮ ಶುರುವಾಗಿದೆ. ಏ.9 ರಂದು ಯುಗಾದಿ ಹಬ್ಬವಿದ್ದು ಎರಡು ದಿನ ಮುಂಚಿತವಾಗಿಯೇ ಹೊಸ ವರ್ಷದ ಆಗಮನವನ್ನು ಸಡಗರದಿಂದ ಆಚರಿಸಲು ಸಿಟಿ ಜನರು ಸಜ್ಜಾಗಿದ್ದಾರೆ. ಹೆಚ್ಚಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

ನಗರದ ವಿವಿಧ ಮಾರುಕಟ್ಟೆಗಳಲ್ಲಿ ಯುಗಾದಿಯ ವ್ಯಾಪಾರ ಜೋರಾಗಿ ನಡೆದಿದೆ. ಬೆಳ್ಳಂಬೆಳಗ್ಗೆ ಕೆ.ಆರ್.‌ ಮಾರುಕಟ್ಟೆಯಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಬೀದಿ ವ್ಯಾಪಾರಿಗಳು ಮಾತ್ರವಲ್ಲದೆ ಇತರ ಜನತೆ ಕೂಡ ತಾಜಾ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳಿಗೆ ಮುಗಿಬಿದ್ದಿದ್ದಾರೆ. ಕೆ.ಆರ್‌. ಮಾರುಕಟ್ಟೆ, ಗಾಂಧಿಬಜಾರ್‌, ಮಲ್ಲೇಶ್ವರಂನಲ್ಲಿ ಬೆಲೆ ಏರಿಕೆ ಬಿಸಿ ನಡುವೆಯೂ ಭರ್ಜರಿ ವ್ಯಾಪಾರ ನಡಿತಿದೆ.

ಇದನ್ನೂ ಓದಿ: Ugadi Ramzan Fashion: ರಂಜಾನ್-ಯುಗಾದಿ ಫೆಸ್ಟೀವ್‌ ಸೀಸನ್‌ನಲ್ಲಿ ಒಟ್ಟೊಟ್ಟಿಗೆ ಲಗ್ಗೆ ಇಟ್ಟ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್

ಒಂದೆಡೆ ಬರಗಾಲ, ಮತ್ತೊಂದಡೆ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹಬ್ಬದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದರೂ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಜನ ಮುಂದಾಗಿದ್ದಾರೆ. ಹೂಗಳ ಬೆಲೆ ಗಗನಕ್ಕೇರಿದೆ. ಕೆಲವು ಬೆಲೆಗಳು ಇಲ್ಲಿವೆ:

ಮಲ್ಲಿಗೆ ಕೆ.ಜಿ – 400 ರಿಂದ 500 ರೂ.
ಸೇವಂತಿಗೆ ಕೆ.ಜಿ – 300 ರಿಂದ 350 ರೂ.
ಗುಲಾಬಿ ಕೆ.ಜಿ – 250 ರೂ.
ಚೆಂಡು ಹೂ ಕೆ.ಜಿ – 150 ರೂ.
ಕಾಕಡ ಕೆ.ಜಿ – 500 ರೂ.
ಕನಕಾಂಬರ ಕೆ.ಜಿ – 800 ರಿಂದ 1000 ರೂ .
ಸುಗಂದರಾಜ ಕೆ.ಜಿ- 300 ರೂ.
ಆಸ್ಟ್ರೇಲಿಯಾ ಹೂ – 600 ರೂ.
ತುಳಸಿ ಒಂದು ಮಾರಿಗೆ 100 ರೂ.
ಬೇವು – ಒಂದು ಕಟ್ಟಿಗೆ 20 ರಿಂದ 30 ರೂ.
ಮಾವಿನ ಎಲೆ -30 ರೂ

ಎಷ್ಟಿದೆ ಹಣ್ಣುಗಳ ಬೆಲೆ

ಅನಾನಸ್ (ಜೋಡಿ) -80 ರೂ
ಆ್ಯಪಲ್ ಕೆ.ಜಿ – 220ರೂ
ದ್ರಾಕ್ಷಿ ಕೆ.ಜಿ- 100 ರೂ
ಸಪೋಟ ಕೆ.ಜಿ- 100ರೂ
ಮೂಸಂಬಿ ಕೆ.ಜಿ- 100 ರೂ
ಕಿತ್ತಲೆ ಹಣ್ಣು ಕೆ.ಜಿ- 140ರೂ
ಕಿವಿ ಹಣ್ಣು (3ಕ್ಕೆ)- 100ರೂ
ಡ್ರ್ಯಾಗನ್ ಪ್ರೂಟ್ – 1 ಹಣ್ಣು- 80ರೂ
ದಾಳೀಂಬೆ-200ರೂ
ಬಟರ್ ಪ್ರೂ -200 ರೂ.
ಮರಸೇಬು ಕೆ.ಜಿ -200ರೂ
ಏಲಕ್ಕಿಬಾಳೆ ಕೆ.ಜಿ – 80ರೂ.
ಪಚ್ಚಬಾಳೆ – 40ರೂ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version