ವಿಜಯಪುರ : ದೊಡ್ಡ ಮೋರಿಯಲ್ಲಿ ಸಿಲುಕಿಕೊಂಡು ಅಲುಗಾಡದ ಸ್ಥಿತಿಯಲ್ಲಿದ್ದ ಹೋರಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ವಿಜಯಪುರ ನಗರದ (Vijayapura News) ಎಸ್.ಆರ್.ಕಾಲೋನಿಯಲ್ಲಿ ಭಾನುವಾರ (ಆ.28) ಹೋರಿಯೊಂದು ಮೋರಿಯಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.
ಸ್ಥಳೀಯರು, ಗೋರಕ್ಷಣಾ ಯುವಕರು, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಮಾಡಿ ಹೋರಿಯನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಜೆಸಿಬಿ ಹಾಗೂ ಅಗ್ನಿಶಾಮಕ ದಳದ ವಾಹನ ಬಳಕೆಯನ್ನು ಮಾಡಲಾಗಿತ್ತು. ಸ್ಥಳೀಯ ಸಮಾಜಸೇವಕ ಪ್ರೇಮಾನಂದ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ…ಮಾಡಿ ಹೋರಿಯನ್ನು ಬಚಾವ್ ಮಾಡಿದ್ದಾರೆ.
ಇದನ್ನೂ ಓದಿ | Belagavi | ಜಾಧವ ನಗರದಲ್ಲಿ ಚಿರತೆ ಪ್ರತ್ಯಕ್ಷ ಪ್ರಕರಣ : ಮುಂದುವರಿದ ಕಾರ್ಯಾಚರಣೆ
ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಮತ್ತು ಅವರ ಮಾನವೀಯ ಗುಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಜಾನುವಾರಗಳನ್ನು ಹಾಗೂ ಬಿಡಾಡಿ ದನಗಳನ್ನು ಹೀಗೆ ಬೀದಿಗೆ ಬಿಡುವವರ ವಿರುದ್ಧ ಕ್ರಮ ಜರುಗಿಸಿ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾ ಮೂಲಕ ಕಮೆಂಟ್ ಮಾಡಿದ್ದಾರೆ.