ಬೆಂಗಳೂರು: ರಾಷ್ಟ್ರೀಯ ವಿಚಾರಗಳನ್ನೊಳಗೊಂಡ ಸದಭಿರುಚಿಯ ಲೇಖನಗಳಿಂದ ಕೂಡಿದ ವಾರಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ʼವಿಕ್ರಮ ವಾರ ಪತ್ರಿಕೆʼಯು 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ವಿಶೇಷ ಲೋಗೊವನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಕೇಶವಕೃಪಾದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಈ ವಿಶೇಷ ಲೋಗೊವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ, ಸಂಪಾದಕ ವೃಷಾಂಕ ಭಟ್, ವ್ಯವಸ್ಥಾಪಕ ಸಂಪಾದಕ ಸು. ನಾಗರಾಜ್, ವ್ಯವಸ್ಥಾಪಕ ಸತೀಶ್.ಬಿ ಉಪಸ್ಥಿತರಿದ್ದರು. ವಿಕ್ರಮ ವಾರಪತ್ರಿಕೆಯು ಪ್ರಖರ ರಾಷ್ಟ್ರೀಯ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು 1948ರ ಗುರುಪೂರ್ಣಿಮಾ ದಿನದಂದು ಆರಂಭಗೊಂಡಿತ್ತು.
ಇದನ್ನೂ ಓದಿ | ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್