Site icon Vistara News

VIMS problem | ಕೇಬಲ್‌ ಬ್ಲಾಸ್ಟ್‌ನಿಂದ ವಿದ್ಯುತ್‌ ವ್ಯತ್ಯಯ ಆಗಿದ್ದು ನಿಜವೆಂದ ಜಿಲ್ಲಾಧಿಕಾರಿ, ಆದರೆ,,,

ವಿಮ್ಸ್‌

ಬಳ್ಳಾರಿ: ಇಲ್ಲಿನ ವಿಜಯನಗರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ವಿಮ್ಸ್‌)ನಲ್ಲಿ ಬುಧವಾರ ಬೆಳಗ್ಗೆ ವಿದ್ಯುತ್‌ ವ್ಯತ್ಯಯ ಆಗಿರುವುದು ನಿಜ ಎಂದು ಜಿಲ್ಲಾದಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಅವರು ಒಪ್ಪಿಕೊಂಡಿದ್ದಾರೆ. ಆದರೆ, ವಿದ್ಯುತ್‌ ವ್ಯತ್ಯಯಕ್ಕೂ ಈಗ ಸಂಭವಿಸಿದೆ ಎನ್ನಲಾಗುತ್ತಿರುವ ಸಾವುಗಳಿಗೂ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ. ಐಸಿಯುಗೆ ವಿದ್ಯುತ್ ಸರಬರಾಜಾಗುವ ಕೇಬಲ್ ಬ್ಲಾಸ್ಟ್ ಆಗಿರುವುದರಿಂದ ಈ ಸಮಸ್ಯೆಯಾಗಿದೆ. ಆದರೆ ರೋಗಿಗಳಿಗೆ ತೊಂದರೆಯಾಗದಂತೆ ಟ್ರಾಮ್ ಕೇರ್ ಸೆಂಟರ್ ಮತ್ತು ನ್ಯೂ ಓಟಿ ಬ್ಲಾಕ್‌ನಲ್ಲಿ ವೆಂಟಿಲೇಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ವಿಮ್ಸ್ ಐಸಿಯುಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿರುವ ಜನರೇಟರ್ ಹಳೆಯದಾಗಿರುವುದರಿಂದ ಈ ರೀತಿಯ ಸಮಸ್ಯೆಯಾಗಿದೆ. ಮೊನ್ನೆ ಸಂಜೆ ಟ್ರಾ‌ನ್ಸ್‌ ಫಾರಂ ಸಮಸ್ಯೆ ಬಗ್ಗೆ ನಿರ್ದೇಶಕರು ನನ್ನ ಗಮನಕ್ಕೆ ತಂದಿದ್ದರು. ಕೂಡಲೇ ಚರ್ಚೆ ಮಾಡಿ ೫೦೦ ಕೆವಿ ಜನರೇಟರ್ ವ್ಯವಸ್ಥೆ ಮಾಡುತ್ತಿದ್ದೇವೆ. ವಿದ್ಯುತ್‌ ವ್ಯತ್ಯಯಕ್ಕೂ ಮತ್ತು ಈ ಪ್ರಕರಣಕ್ಕೆ ಸಂಬಂಧವೇ ಇಲ್ಲವೆಂದು ತಿಳಿಸಿದರು.

ಈಗಾಗಲೇ ಬಾಡಿಗೆ ಜನರೇಟರ್ ನಲ್ಲಿಯೇ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಜನರೇಟರ್ ಆನ್ ಮಾಡಿದರೂ, ಕೇಬಲ್ ಬ್ಲಾಸ್ಟ್ ಆಗಿರುವುದರಿಂದ ಸಮಸ್ಯೆಯಾಗುತ್ತದೆ. ಐಸಿಯುನಲ್ಲಿ ಎರಡು ಕೇಬಲ್ ವ್ಯವಸ್ಥೆ ಮಾಡಬೇಕು, ಜೆಸ್ಕಾಂ ಅವರ ಪ್ರಕಾರ ಇದು ಸುಮಾರು ೪೦ ವರ್ಷಗಳ ಹಳೆಯ ಆಗಿರುವುದರಿಂದ ಲೈನ್ ಇಂಟರ್‌ ಲಿಂಕ್‌ ಆಗಿರಬಹುದೆಂದು ಹೇಳುತ್ತಿದ್ದಾರೆ ಎಂದರು.

ಟ್ರಾಮಾ ಕೇರ್ ಸೆಂಟರ್ನಲ್ಲಿ ೯೬ ವೆಂಟಿಲೇಟರ್ ಹಾಸಿಗೆಗಳ ವ್ಯವಸ್ಥೆ ಇದೆ, ಇನ್ನು ನ್ಯೂ ಓಟಿ ಕೇರ್‌ ನಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ, ಹೊಸದಾಗಿ ಬರುವ ಎಲ್ಲಾ ಪ್ರಕರಣಗಳನ್ನು ಅಲ್ಲಿಗೆ ಕಳಿಸುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಮ್ಸ್ ನಿರ್ದೇಶಕರಾದ ಗಂಗಾಧರಗೌಡ, ವೈದ್ಯರು ಇದ್ದರು.

ಇದನ್ನೂ ಓದಿ | ಬಳ್ಳಾರಿ ವಿಮ್ಸ್ ಆಸ್ಪತ್ರೆ ವಿದ್ಯುತ್‌ ಸಮಸ್ಯೆ: ಇಬ್ಬರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚನೆ

Exit mobile version