Site icon Vistara News

ಜುಲೈ 28ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಭಾಷಿ ಅಲ್ಲ ಬದ್ಕ್‌!

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಬೆಂಗಳೂರು: ಕುಂದಾಪುರ ಜನರು ಜು.28 ಗುರುವಾರ ವಿಶ್ವ ಕುಂದಾಪುರ ದಿನಾಚರಣೆಯನ್ನು ಆಚರಿಸುತ್ತಾರೆ. ಕುಂದಾಪುರ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಜಗತ್ತಿನ ವಿವಿಧೆಡೆ ಈ ದಿನವನ್ನು ಆಚರಿಸುತ್ತಾರೆ.

ಜು.28ರಂದು ಆಸಾಡಿ ಅಮವಾಸ್ಯೆ ಪ್ರಯುಕ್ತ ಬೆಂಗಳೂರಿನ ವಿಜಯ ನಗರದ ಬಂಟರ ಸಂಘದ ಸಭಾಭವನದಲ್ಲಿ ವಿಶ್ವ ಕುಂದಾಪ್ರ ದಿನವನ್ನು ಆಚರಿಸಲಾಗುತ್ತದೆ. ಗುರುವಾರ (ಜುಲೈ ೨೮) ಸಂಜೆ 4 ಗಂಟೆಯಿಂದ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಕುಂದಾಪುರ ಕಟ್ಕಟ್ಲೆ, ಕುಂದಾಪ್ರ ಗೀತಾಗಾಯನ, ಮನು ಹಂದಾಡಿ ಮಾತು, ಚೇತನ್‌ ನೈಲಾಡಿ ತಂಡದ ಮಹಿಳೆಯರ ಪಂಚಾಯ್ತಿ, ಕುಶಲವ ಯಕ್ಷಗಾನ,ಮಂಡ್ಯ ಟು ಮಂದಾರ್ತಿ ಹಾಗೂ ಕರ್ಕಾಟಿ ಅಮಾಸಿಯ ಕಿರುಚಿತ್ರ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ | Bheemana Amavasya | ಸರ್ವ ಮಂಗಲಕಾರಕ ಭೀಮನ ಅಮಾವಾಸ್ಯೆ; ವ್ರತಾಚರಣೆ ಹೇಗೆ?

ಕೆಜಿಎಫ್‌ ಖ್ಯಾತಿಯ ರವಿ ಬಸ್ರೂರು, ಮಂದಾರ್ತಿ ಮೂಲದ ನಿರ್ದೇಶಕ ಯೋಗರಾಜ ಭಟ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಯಪ್ರಕಾಶ್‌ ಹೆಗ್ಡೆ, ನಟ ಪ್ರಮೋದ್‌ ಶೆಟ್ಟಿ , ಆರ್‌.ಉಪೇಂದ್ರ ಶೆಟ್ಟಿ, ರಘು ಪಾಂಡೇಶ್ವರ, ನಾಗರಾಜ್‌ ಸೇರಿಗಾರ್‌, ಚೇತನ್‌ ಜಿ, ಶಂಕರ್‌ ಕುಲಾಲ್‌ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕುಂದಾಪುರ ಭಾಷಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.

ಕನ್ನಡ ನಾಡು ಹಲವು ಸಂಸ್ಕೃತಿಗಳ ತವರೂರು. ಇಲ್ಲಿ ಕಲೆ , ಸಂಸ್ಕೃತಿ, ಶಿಲ್ಪ ಕಲೆಗಳ ಬೀಡು. ಕರ್ನಾಟಕದಲ್ಲಿ ವಿವಿಧ ಪ್ರಕಾರಗಳ ಕನ್ನಡವನ್ನು ನೋಡಬಹುದು. ಕಡಲತೀರ ಕುಂದಾಪುರದಲ್ಲಿ ಕುಂದ ಕನ್ನಡದ ಸೊಬಗನ್ನು ಕಾಣಬಹುದು. ಆಟಿ ಅಮಾವಸ್ಯೆಯ ದಿನ ಭಾಷೆ ಮೇಲಿನ ಅಭಿಮಾನದಿಂದ ಜಗತ್ತಿನ ವಿವಿಧೆಡೆ ವಿಶ್ವ ಕುಂದಾಪ್ರ ದಿನ ಆಚರಿಸುತ್ತಾರೆ.

ಬ್ರಹ್ಮಾವರದಿಂದ ಶಿರೂರಿನ ತನಕ ಮೂರು ತಾಲೂಕುಗಳಲ್ಲಿ ಈ ಭಾಷೆ ವ್ಯಾಪಿಸಿರುವುದು ವಿಶೇಷ. ವಿಶ್ವ ಕುಂದಾಪುರ ಜನತೆ ವಿಶ್ವ ಕುಂದಾಪ್ರ ಎಂಬ ದಿನವನ್ನು ಕಳೆದ ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ದಿನಾಂಕದ ನಿಗದಿ ಏನಿಲ್ಲ. ಪ್ರತಿ ವರ್ಷ ಆಟಿ ಅಮಾವಸ್ಯೆ ದಿನದಂದು ಆಚರಿಸಿಕೊಂಡು ಬರುತ್ತಿದ್ದಾರೆ.

Exit mobile version