Site icon Vistara News

VISL Factory: ಭದ್ರಾವತಿಯ ವಿಐಎಸ್‍ಎಲ್ ಉಳಿಸಲು ಎಂಪ್ಲಾಯಿಸ್ ಅಸೋಶಿಯೇಷನ್ ಮನವಿ

VISL Bhadravathi

#image_title

ಸಾಗರ: ಭದ್ರಾವತಿಯ ವಿಐಎಸ್‍ಎಲ್ (VISL Factory) ಉಳಿಸುವಂತೆ ಒತ್ತಾಯಿಸಿ ಶುಕ್ರವಾರ (ಮಾ.24) ವಿಐಎಸ್‍ಎಲ್ ಎಂಪ್ಲಾಯಿಸ್ ಅಸೋಶಿಯೇಷನ್ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯೂನಿಯನ್‍ನ ದಯಾನಂದ್ ಬಿ.ಎಸ್., “ವಿಐಎಸ್‍ಎಲ್ ಉಳಿಸುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದರೂ ಅದು ಸರ್ಕಾರದ ಕಣ್ಣು ತೆರೆಸುತ್ತಿಲ್ಲ. 1918ರಲ್ಲಿ ಸ್ಥಾಪಿಸಲಾಗಿದ್ದ ವಿ.ಐ.ಎಸ್.ಎಲ್. ನೂರು ವರ್ಷ ಪೂರೈಸಿದ್ದು, ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಏಷ್ಯಾ ಖಂಡದಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದಿದ್ದ ಕಾರ್ಖಾನೆ ಈಗ ಆಳುವವರ ಅವಕೃಪೆಯಿಂದ ಮುಚ್ಚುವ ಹಂತಕ್ಕೆ ಬಂದಿದೆ. ಸೈಲ್ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರ ವಿಐಎಸ್‍ಎಲ್ ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಂಡಿರುವುದರಿಂದ ಜಿಲ್ಲಾದ್ಯಂತ ಜನಜಾಗೃತಿ ಮೂಡಿಸಲು ಸಂಘವು ತೀರ್ಮಾನಿಸಿ ಸಾಗರದಿಂದ ಪ್ರತಿಭಟನೆ ಮತ್ತು ಜಾಗೃತಿ ಆರಂಭಿಸಿದೆ. ವಿಐಎಸ್ಎಲ್ ಉಳಿಸಿಕೊಳ್ಳಲು ಏಳು ತಾಲೂಕಿನಲ್ಲೂ ಜನಜಾಗೃತಿ ಮೂಡಿಸಿ ಒಮ್ಮತದ ಅಭಿಪ್ರಾಯವನ್ನು ಆಳುವವರ ಮುಂದೆ ಇರಿಸಿ ಹಕ್ಕೊತ್ತಾಯ ಮಂಡಿಸಲಾಗುತ್ತದೆ” ಎಂದರು.

ಮಲೆನಾಡು ರೈತ ಹೋರಾಟ ವೇದಿಕೆಯ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, “ಕೇಂದ್ರ ಸರ್ಕಾರ ಎಂಪಿಎಂ, ಸಕ್ಕರೆ ಕಾರ್ಖಾನೆ ಮುಚ್ಚಿ, ಖಾಸಗೀಕರಣಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಉದ್ಯಮಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿಗಳು ವಿಐಎಸ್‍ಎಲ್ ಮುಚ್ಚುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಎಲ್ಲರೂ ಕೊಟ್ಟ ಭರವಸೆ ಮರೆತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘವು ಹಮ್ಮಿಕೊಂಡಿರುವ ಈ ಜನಾಂದೋಲನಕ್ಕೆ ನಮ್ಮ ಸಂಪೂರ್ಣ ಸಹಕಾರವಿದ್ದು, ಸರ್ಕಾರ ತಕ್ಷಣ ವಿಐಎಸ್‍ಎಲ್ ಪುನರಾರಂಭಿಸುವತ್ತ ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: Rahul Gandhi Disqualified: ರಾಹುಲ್‌ ಗಾಂಧಿ ಅನರ್ಹಕ್ಕೆ ಕನ್ನಡಿಗರೊಬ್ಬರೂ ಕಾರಣ, ಯಾರಿವರು?

ಈ ಸಂದರ್ಭದಲ್ಲಿ ಶ್ರೀನಿವಾಸ್ ಎಸ್.ಆರ್., ದೇವರಾಜ್ ಸಿಂಗ್, ಶೇಷಪ್ಪ ಗೌಡ, ಪಳನಿ, ಸುಂದರ್ ಸಿಂಗ್, ದಿನೇಶ್ ಶಿರವಾಳ, ಅಮೃತ್‍ರಾಸ್, ಜೇಮ್ಸ್, ಧರ್ಮರಾಜ್, ಟೀಟೂ, ಎಲ್.ವಿ.ಸುಭಾಷ್ ಇನ್ನಿತರರು ಹಾಜರಿದ್ದರು.

Exit mobile version