Site icon Vistara News

Vistara Digital | ವಿಸ್ತಾರಕ್ಕೆ ಯಶಸ್ಸು ಸಿಗಲಿ; ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಶುಭ ಹಾರೈಕೆ

Vistara Digital

ಬೆಂಗಳೂರು: ವಿಸ್ತಾರ ಮೀಡಿಯಾ ಪ್ರೈ.ಲಿ ಸಂಸ್ಥೆಯ ವಿಸ್ತಾರ ಡಿಜಿಟಲ್ ನ್ಯೂಸ್‌ ಲೋಗೊ ಮತ್ತು ವೆಬ್‌ಸೈಟ್‌ (Vistara Digital) ಶನಿವಾರ ಅನಾವರಣಗೊಂಡಿದೆ. ಈ ಹೊಸ ಮಾಧ್ಯಮ ಸಂಪೂರ್ಣ ಯಶಸ್ಸು ಪಡೆಯಲಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಶುಭ ಹಾರೈಸಿದ್ದಾರೆ.

ಸಿ.ಎಸ್‌. ಷಡಕ್ಷರಿ

“ಕರ್ನಾಟಕ ರಾಜ್ಯದ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಆವಿಷ್ಕಾರದ ರೂಪದಲ್ಲಿ ವಿಸ್ತಾರ ಮೀಡಿಯಾದ ಲೋಗೊ ಮತ್ತು ವೆಬ್‌ಸೈಟ್‌ ಮಾನ್ಯ ಮುಖ್ಯಮಂತ್ರಿಗಳಿಂದ ಶನಿವಾರ ಲೋಕಾರ್ಪಣೆಗೊಂಡಿದೆ. ವಿಸ್ತಾರ ರಾಜ್ಯದಲ್ಲಿ ಹೊಸ ಶಕೆಯನ್ನು ಆರಂಭಿಸಲಿ. ವಾಸ್ತವ ಮತ್ತು ನೈಜ ಸುದ್ದಿಗೆ ಆದ್ಯತೆ ನೀಡಿ ಸಮಾಜಮುಖಿಯಾಗಿ ಕೆಲಸ ಮಾಡುತ್ತದೆ ಅನ್ನೋ ವಿಶ್ವಾಸ ಇದೆʼʼ ಎಂದು ಷಡಾಕ್ಷರಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಹರಿಪ್ರಕಾಶ ಕೋಣೆಮನೆ ನೇತೃತ್ವದಲ್ಲಿ ಈ ಮಾಧ್ಯಮ ಸಂಪೂರ್ಣ ಯಶಸ್ಸು ಪಡೆಯಲಿ ಎಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಶುಭಾಶಯ ಕೋರುತ್ತೇನೆ ಎಂದು ಷಡಾಕ್ಷರಿಯವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | Vistara Digital | ವಿಸ್ತಾರ ನ್ಯೂಸ್‌ಗೆ ರಾಜ್ಯದ ಗಣ್ಯರಿಂದ ಶುಭಾಶಯಗಳ ಮಹಾಪೂರ

Exit mobile version