ಹಾವೇರಿ: ಹಾವೇರಿಯಲ್ಲಿ ಸ್ವಚ್ಛ ಭಾರತ ಅಭಿಯಾನ (Swachh Bharat Mission) ಯೋಜನೆ ಹಳ್ಳ ಹಿಡಿದಿತ್ತು. ಮನೆ ಮನೆಯಿಂದ ಕಸ ಸಂಗ್ರಹಿಸಲು ಖರೀದಿಸಿದ್ದ 32 ಸಾವಿರ ಕಸದ ಡಬ್ಬಿಗಳು (Dustbin distribution) ರಂಗಮಂದಿರಲ್ಲೇ ಧೂಳು ಹಿಡಿದಿತ್ತು. ವಿಸ್ತಾರ ನ್ಯೂಸ್ ವರದಿ (Vistara Impact) ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕಸದ ಡಬ್ಬಿಗಳನ್ನು ಆಗಸ್ಟ್ 9 ರಿಂದ ಮನೆ ಮನೆಗೆ ನೀಡಲು ನಿರ್ಧರಿಸಿದ್ದಾರೆ.
ಹಾವೇರಿ ನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲೆಂದು ಡಸ್ಟ್ ಬೀನ್ ಖರೀದಿ ಮಾಡಲಾಗಿತ್ತು. ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ 32, 350 ಡಸ್ಟ್ ಬೀನ್ ಖರೀದಿಸಿ ಐದಾರು ತಿಂಗಳುಗಳೆ ಕಳೆದು ಹೋಗಿದೆ. ನಗರದ 31 ವಾರ್ಡ್‌ಗಳಲ್ಲಿರುವ 16, 175 ಮನೆಗಳಿಗೆ ಡಸ್ಟ್ ಬೀನ್ ವಿತರಣೆ ಮಾಡಬೇಕಿತ್ತು. ಪ್ರತಿ ಮನೆಗೆ ಎರಡೆರಡು ಕಸದ ಡಬ್ಬಿಗಳನ್ನು ವಿತರಣೆ ಮಾಡದೆ, ನಗರದ ಗೂಗಿಕಟ್ಟಿಯಲ್ಲಿರುವ ಹೈಟೇಕ್ ರಂಗಮಂದಿರಲ್ಲಿ ಇಡಲಾಗಿದೆ. ಇದಕ್ಕಾಗಿ 46 ಲಕ್ಷ ರೂಪಾಯಿ ವೆಚ್ಚ ಮಾಡಿದ್ದು ಜನರ ಉಪಯೋಗಕ್ಕೆ ಬಂದಿರಲಿಲ್ಲ.
ಇದನ್ನೂ ಓದಿ: Bomb Blast : ಕಾಡುಹಂದಿಗೆ ಬಾಂಬಿಟ್ಟ ಪ್ರಕರಣ; ಚೆಂಡಿಯಾದಲ್ಲಿ ಮತ್ತೊಂದು ಜೀವಂತ ಬಾಂಬ್ ಪತ್ತೆ!
ಮನೆ ಮನೆಗೆ ವಿತರಣೆಯಾಗದ ಡಸ್ಟ್ ಬೀನ್‌ಗಳ ಕುರಿತು ವಿಸ್ತಾರ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು, ಅಧಿಕಾರಿಗಳು ಈಗ ಡಸ್ಟ್ ಬೀನ್ ವಿತರಣೆಗೆ ಮುಹೂರ್ತ ಇಟ್ಟಿದ್ದಾರೆ. ಆಗಸ್ಟ್ 9 ರಂದು ನಗರದ 31 ವಾರ್ಡ್‌ಗಳಲ್ಲಿ ಮನೆ ಮನೆಗೆ ಕಸದ ಡಬ್ಬಿಗಳನ್ನು ತಲುಪಿಸಲು ಕಾರ್ಯಕ್ರಮ ಆಯೋಜಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಆಗಸ್ಟ್ 9 ರಂದು ಡಸ್ಟ್ ಬೀನ್ ವಿತರಣೆಗೆ ಚಾಲನೆ ನೀಡುತ್ತಿದ್ದಾರೆಂದು ವಿಸ್ತಾರ ನ್ಯೂಸ್‌ಗೆ ಮಾಜಿ ನಗರಸಭೆ ಅಧ್ಯಕ್ಷ ಸಂಜೀವ್ ನೀರಲಗಿ ತಿಳಿಸಿದ್ದಾರೆ. ಹಾವೇರಿ ನಗರದಲ್ಲಿ ಐದಾರು ತಿಂಗಳಿನಿಂದ ವಿತರಣೆಯಾಗದೆ ರಂಗಮಂದಿರ ಸೇರಿದ್ದ ಡಸ್ಟ್ ಬೀನ್‌ಗಳನ್ನು ಮನೆ ಮನೆಗೆ ತಲುಪಿಸಲು ದಿನಾಂಕ ನಿಗದಿ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ