ಗಂಗಾವತಿ: ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಅಂತರ್‌ರಾಜ್ಯಕ್ಕೆ (Interstate) ಹೋಗುತ್ತಿದ್ದರೂ ನಮ್ಮ ಗಡಿ ಭಾಗದವರೆಗೂ ಮಹಿಳೆಯರಿಗೆ (Womens) ಉಚಿತ ಪ್ರಯಾಣಕ್ಕೆ (Free Travel) ಅವಕಾಶ ಕಲ್ಪಿಸುವ ಸಂಬಂಧ ಗಮನ ಹರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ `ವಿಸ್ತಾರ ಡಿಜಿಟಲ್’ನಲ್ಲಿ ಪ್ರಸಾರವಾದ ಗಂಗಾವತಿಯ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರಿಗೆ ಇಲ್ಲ ಶಕ್ತಿ ಯೋಜನೆಯ ಭಾಗ್ಯ ಎಂಬ ವರದಿ ಗಮನಿಸಿದ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಗಾವತಿಯಿಂದ ಬಳ್ಳಾರಿಗೆ ತೆರಳುವ ಬೆಳಗಿನ ಸಮಯದ ಬಹುತೇಕ ವಾಹನಗಳು ಅಂತರ್‌ರಾಜ್ಯಕ್ಕೆ ಹೋಗುತ್ತಿರುವ ಕಾರಣಕ್ಕೆ ಈ ವಾಹನಗಳಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂಬ ವರದಿ ಗಮನಿಸಿದ್ದೇನೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: Weather Report: ಮುಂಗಾರು ಚುರುಕು; ಜೂ.17ರವರೆಗೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
ಆಂಧ್ರಪ್ರದೇಶಕ್ಕೆ ಹೋಗುವ ವಾಹನಗಳು ಆಂಧ್ರಪ್ರದೇಶದ ಸಾರಿಗೆ ಇಲಾಖೆಗೆ ಸಂಬಂಧಿಸಿದ್ದರೆ ಅದರಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ. ಆದರೆ ನಮ್ಮ ರಾಜ್ಯದ ವಾಹನಗಳು ಅಂತರ್‌ರಾಜ್ಯಕ್ಕೆ ಹೋಗುತ್ತಿದ್ದರೂ ಅದರಲ್ಲಿ ಪ್ರಯಾಣಿಸಲು ಅವಕಾಶವಿದೆ. ಇದಕ್ಕಾಗಿ ಶಕ್ತಿ ಯೋಜನೆಯಲ್ಲಿ ಕೆಲ ನಿರ್ದೇಶನಗಳಿವೆ. ಹೊರ ರಾಜ್ಯದ ವಾಹನ, ನಮ್ಮ ರಾಜ್ಯದ ಹವಾನಿಯಂತ್ರಿತ, ಐಷಾರಾಮಿ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ. ಇದು ನಿರ್ದೇಶನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Lalitha Natarajan: ಚೆನ್ನೈನ ಲಲಿತಾ ನಟರಾಜನ್‌ಗೆ ಅಮೆರಿಕದ ಪ್ರತಿಷ್ಠಿತ ಇಕ್ಬಾಲ್ ಮಸಿಹ್ ಪ್ರಶಸ್ತಿ
ನಮ್ಮ ರಾಜ್ಯದ ಅದರಲ್ಲೂ ಕೆಂಪು ಬಸ್ಸುಗಳು ಅಂತರ್‌ರಾಜ್ಯಕ್ಕೆ ಹೋಗುತ್ತಿದ್ದರೆ ಅದರಲ್ಲಿ ನಮ್ಮ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಈ ಸಂಬಂಧಿ ಸಾರಿಗೆ ಘಟಕದ ವ್ಯವಸ್ಥಾಪಕ ಹಾಗೂ ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿಗಳನ್ನು ಕರೆಯಿಸಿ ಮಾತನಾಡುತ್ತೇನೆ ಎಂದು ತಂಗಡಗಿ ಹೇಳಿದರು.