Site icon Vistara News

Vistara Impact | ಬಳ್ಳಾರಿಯಲ್ಲಿ ರಸ್ತೆ ಕಾಮಗಾರಿ ಪರಿಶೀಲಿಸಿದ ಮೇಯರ್‌; ವೀಕ್ಷಕ ವರದಿಗಾರನ ವರದಿಗೆ ತ್ವರಿತ ಸ್ಪಂದನೆ

Vistara Impact

ಬಳ್ಳಾರಿ: ವಿಸ್ತಾರ ವೀಕ್ಷಕ ವರದಿಗಾರನ “ಬಳ್ಳಾರಿ ಕಥೆ ವ್ಯಥೆ” ರಸ್ತೆಯ ದುಸ್ಥಿತಿಯ ವರದಿಗೆ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಮತ್ತು ಪಾಲಿಕೆ ಆಯುಕ್ತ ರುದ್ರೇಶ್ ಅವರು ತ್ವರಿತವಾಗಿ ಸ್ಪಂದಿಸಿ (Vistara Impact) ಅಧಿಕಾರಿಗಳ ತಂಡದೊಂದಿಗೆ ಮೋಕಾ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ತಾಕೀತು ಮಾಡಿದರು.

ವೀಕ್ಷಕ ವರದಿಗಾರ ಮಾಲಿಕೆಯಲ್ಲಿ ವಿಸ್ತಾರ ನ್ಯೂಸ್‌ನಿಂದ ಬಳ್ಳಾರಿ ಮಹಾನಗರದಲ್ಲಿ ರಸ್ತೆಗಳ ದುಸ್ಥಿತಿ ಬಗ್ಗೆ ವರದಿ ಮಾಡಿ, ಮೇಯರ್ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಮೇಯರ್ ರಾಜೇಶ್ವರಿ ಅವರು, ರಸ್ತೆಯ ದುರಸ್ತಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.

ಇದನ್ನೂ ಓದಿ | KIADB Scam | ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣದ ತನಿಖೆ ಶುರು; ಭೂಸ್ವಾಧೀನಕ್ಕೆ 2 ಬಾರಿ ಪರಿಹಾರ ಪಡೆದ ಆರೋಪ

ರಸ್ತೆ ಕಾಮಗಾರಿಯನ್ನು ಇನ್ನು ಹದಿನೈದು ದಿನದಲ್ಲಿ ಪೂರ್ಣಗೊಳಿಸಲಾಗುತ್ತದೆ, ಒಳಚರಂಡಿ ಸಮಸ್ಯೆಯ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿದೆ, ನಂತರ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮೂರು ತಿಂಗಳ ಒಳಗಾಗಿ ಬಳ್ಳಾರಿ ಬಹುತೇಕ ರಸ್ತೆಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಇನ್ನು ೧೫ ದಿನದಲ್ಲಿ ಮೋಕಾ ರಸ್ತೆಯ ಬಹುಭಾಗ ರಸ್ತೆ ನಿರ್ಮಾಣವಾಗಲಿದೆ. ಇನ್ನು ಸ್ವಲ್ಪ ಭಾಗ ಮಾತ್ರ ಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಸಮಯಬೇಕಾಗುತ್ತದೆ ಎಂದು ಅಧಿಕಾರಿಗಳು ಮೇಯರ್‌ಗೆ ವಿವರಿಸಿದರು.

ಮೇಯರ್ ರಾಜೇಶ್ವರಿ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಮಗಾರಿ ಸ್ಥಳವನ್ನು ಖುದ್ದಾಗಿ ತಾವೇ ಅರಿತುಕೊಂಡು, ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ವಿಸ್ತಾರ ನ್ಯೂಸ್ ವೀಕ್ಷಕ ವರದಿಗಾರ ಸ್ವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಸ್ತಾರ ನ್ಯೂಸ್‌ ವರದಿಯು ಸಾರ್ವಜನಿಕವಾಗಿಯೂ ಮೆಚ್ಚುಗೆ ಪಡೆದಿದ್ದು, ಇದೇ ಮಾದರಿಯಲ್ಲಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಆಶಿಸಿದರು.

ಇದನ್ನೂ ಓದಿ | Ahara Vahini | ಆರ್ಯ ವೈಶ್ಯ ಆಹಾರ ವಾಹಿನಿಗೆ 2 ಲಕ್ಷ ರೂಪಾಯಿ ಸಹಾಯಧನ: ಕಂದಾಯ ಸಚಿವ ಆರ್‌. ಅಶೋಕ್

Exit mobile version