Site icon Vistara News

Vistara Impact: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಾರ್ಡನ್‌ ವರ್ಗಾವಣೆ

students congratulated the social concern of Vistara News

ಕಲಬುರಗಿ: ವಾರ್ಡನ್‌ (Warden) ಸರಿಯಾಗಿ ಊಟ ನೀಡುತ್ತಿಲ್ಲವೆಂದು ವಿದ್ಯಾರ್ಥಿನಿಯರ ಪ್ರತಿಭಟನೆ (Protest) ಕುರಿತು ವಿಸ್ತಾರ ನ್ಯೂಸ್‌ನಲ್ಲಿ ಪ್ರಸಾರವಾದ ವರದಿಗೆ ಎಚ್ಚೆತ್ತುಕೊಂಡ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಸತಿ ಶಾಲೆಯಲ್ಲಿನ ವಾರ್ಡನ್‌ ನಾಗಮ್ಮ ಅವರನ್ನು ವರ್ಗಾಯಿಸಿ (Transfer) ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಾರ್ಡನ್‌ ನಾಗಮ್ಮ ಅವರು, ಮೆನು ಚಾರ್ಟ್‌ ಪ್ರಕಾರ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿ ಶಾಲೆಯ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಕೂಡಲೇ ವಾರ್ಡನ್‌ರನ್ನು ಬದಲಾಯಿಸುವಂತೆ ಶಾಲಾ ವಿದ್ಯಾರ್ಥಿನಿಯರು ಆಗ್ರಹಿಸಿದ್ದರು.

ಇದನ್ನೂ ಓದಿ: IBPS RRB Notification 2023 : ಗ್ರಾಮೀಣ ಬ್ಯಾಂಕುಗಳಲ್ಲಿ 9,075 ಹುದ್ದೆ; ಅರ್ಜಿ ಸಲ್ಲಿಸಲು ಇನ್ನೂ ಎರಡು ದಿನ ಅವಕಾಶ

ಕಳೆದ ಕೆಲ ದಿನಗಳ ಹಿಂದೆ ಈ ಕುರಿತು ವಿಸ್ತಾರ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗಿತ್ತು, ಇದರ ಬೆನ್ನಲ್ಲೇ ಆಳಂದ ಶಾಸಕ ಬಿ.ಆರ್.ಪಾಟೀಲ್ ಸಹ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಆದರೂ ವ್ಯವಸ್ಥೆ ಬದಲಾಗಿರಲಿಲ್ಲ, ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ಮತ್ತೆ ವಿದ್ಯಾರ್ಥಿನಿಯರು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ಸುದ್ದಿ ತಿಳಿದ ಸಮಾಜ ಕಲ್ಯಾಣ ಇಲಾಖೆ ಜಂಟಿ‌ ನಿರ್ದೇಶಕಿ ಶುಭಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದರು, ಈ ವೇಳೆ ಶಾಲೆಯಲ್ಲಿ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ದ ಆರೋಪಗಳ ಸುರಿಮಳೆ ಗೈದರು. ಕರ್ತವ್ಯ ಆರೋಪದ ಮೇಲೆ ವಾರ್ಡನ್‌ ನಾಗಮ್ಮ ಅವರನ್ನು ಕೂಡಲೇ ಅಫಜಲಪುರ ತಾಲೂಕಿನ ಕರಜಗಿಯಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Weather report: ಥಂಡಿ ಗಾಳಿಯೊಂದಿಗೆ ಈ ಐದು ಜಿಲ್ಲೆಗಳಲ್ಲಿ ಅಬ್ಬರಿಸಲಿರುವ ವರುಣ; ಇದರಲ್ಲಿ ನಿಮ್ಮ ಊರು ಇದೆಯಾ ನೋಡಿ

ವಿಸ್ತಾರ ನ್ಯೂಸ್‌ನ ಸಾಮಾಜಿಕ ಕಳಕಳಿಗೆ ವಿದ್ಯಾರ್ಥಿನಿಯರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version