Site icon Vistara News

Vistara Impact: ವಿಸ್ತಾರ ಫಲಶ್ರುತಿ; ಅಫಜಲಪುರ ಗೌರ್(ಬಿ) ಗ್ರಾಮದಲ್ಲಿ ಅಕ್ರಮ‌ ಮದ್ಯ ವಶ

Afazalpur Illicit liquor seized

ಅಫಜಲಪುರ: ತಾಲೂಕಿನ ಗೌರ್(ಬಿ) ಗ್ರಾಮದಲ್ಲಿ ಅಕ್ರಮ‌ ಮದ್ಯ (Illicit liquor) ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ‌ನಡೆಸಿ 12.960 ಲೀಟರ್‌ ಮದ್ಯ 7.920 ಬಿಯರ್ ಅನ್ನು ಜಪ್ತಿ (Seized) ಮಾಡಿಕೊಂಡಿದ್ದಾರೆ. ಮದ್ಯದ ಅಕ್ರಮ ಮಾರಾಟದ ಕುರಿತು ವಿಸ್ತಾರ ನ್ಯೂಸ್‌ ಸಮಗ್ರವಾಗಿ ವರದಿ ಮಾಡಿತ್ತು.

ತಾಲೂಕಿನ ಗೌರ್ (ಬಿ) ಗ್ರಾಮದ‌ಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮದ ಮಹಿಳೆಯರು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಅವರಿಗೆ ಮನವಿ ಮಾಡಿದ್ದರು.

ಗ್ರಾಮದ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದಾಗಿ ಮಕ್ಕಳು ಮದ್ಯದ ದಾಸರಾಗುತ್ತಿದ್ದಾರೆ, ಇದರಿಂದಾಗಿ ಸಂಸಾರಗಳು ಬೀದಿ ಪಾಲಾಗುತ್ತಿವೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು.
ಕೂಡಲೇ ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು.

ಈ ಬಗ್ಗೆ ಎಚ್ಚೆತ್ತುಕೊಂಡ ಅಬಕಾರಿ ಇಲಾಖೆಯ ಅಧಿಕಾರಿಗಳು, ಗ್ರಾಮದ ಬಸವರಾಜ್ ತಂದೆ ಬಾಲಯ್ಯ ಗುತ್ತೇದಾರ್ ಎಂಬುವರರ ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಲಬುರಗಿ ಜಿಲ್ಲಾ ಅಬಕಾರಿ ಇಲಾಖೆ ಡೆಪ್ಯೂಟಿ ಕಮಿಷನರ್‌ ನಿರ್ದೇಶನದ ಮೇರೆಗೆ ಆಳಂದ ವಲಯದ ಉಪ ನಿರೀಕ್ಷಕ ಬಸವರಾಜ್ ಮಾಲಗತ್ತಿ ಅವರು ದಾಳಿ ನಡೆಸಿ 12.960 ಲೀಟರ್‌ ಮದ್ಯ, 7.920 ಬಿಯರ್ ಅನ್ನು ವಶಪಡೆಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version