Site icon Vistara News

Vistara News Launch | ಚಿಕ್ಕಬಳ್ಳಾಪುರದಲ್ಲಿ ವಿಸ್ತಾರ ಕನ್ನಡ ಸಂಭ್ರಮ

Vistara News Launch

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಗಾಯನ, ನೃತ್ಯದ ಹಾಗೂ ಹಾಸ್ಯ ಸಂಭಾಷಣೆ ಗಮನ ಸೆಳೆದರೆ, ವೇದಿಕೆ ಹೊರಗಿದ್ದ ವಿವಿಧ ಮಳಿಗೆಗಳು ಜನರನ್ನು ಆಕರ್ಷಿಸಿದವು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಸ್ಥೆಗಳ ಮಳಿಗೆಗಳನ್ನು ತೆರೆಯಲಾಗಿತ್ತು. ವಿಸೇಜ್‌, ಆಸ್ಟಿನ್ಸ್‌, ಶಿರಸಿ ಸುಪಾರಿ, ರಿಪೋಸ್, ಅಮೃತ್‌ ನೋನಿ ಹೆಲ್ತ್‌ಕೇರ್‌, ಮೆಗಾಲೈಟ್‌, ಲೆವಿಸ್ಟಾ ಕಾಫಿ ಹಾಗೂ ಇಂಡಸ್‌ 555-ಡಿ ಟಿಎಂಟಿ ಸಂಸ್ಥೆಗಳ ಮಳಿಗೆಗಳನ್ನು ಇಡಲಾಗಿತ್ತು. ಅದೇ ರೀತಿ ಬಗೆ ಬಗೆಯ ಆಹಾರಾ ಖಾದ್ಯಗಳ ಮಾರಾಟ ಮಳಿಗೆಗಳೂ ಗಮನ ಸೆಳೆದವು.

ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್, ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಆರ್.ವೆಂಕಟರೆಡ್ಡಿ, ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ್, ಹಿರಿಯ ಪತ್ರಕರ್ತ, ಸಾಹಿತಿ ಸೋ ಸೋ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತೆ ಪ್ರೇಮಲತಾ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಸನ್ಮಾನ ಮಾಡಲಾಯಿತು.

ಇದನ್ನೂ ಓದಿ | Vistara News Launch | ಮಾಧ್ಯಮಗಳು ಪ್ರಜೆಗಳ ಮುಖವಾಣಿಯಾಗಲಿ, ವಿಸ್ತಾರ ನ್ಯೂಸ್‌ ವಿಸ್ತಾರವಾಗಲಿ: ಜಿ.ಎಂ. ಸಿದ್ದೇಶ್ವರ್

Exit mobile version