ಮಡಿಕೇರಿ: ವಿಶ್ವ ಛಾಯಾಗ್ರಹಣ ದಿನಾಚರಣೆ (World Photography Day) ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ದೃಶ್ಯಂ-2023 ಶೀರ್ಷಿಕೆಯಡಿ ಮಡಿಕೇರಿಯ ಗಾಂಧಿಭವನದಲ್ಲಿ ಪ್ರೆಸ್ ಕ್ಲಬ್ ಸದಸ್ಯರಿಗೆ ಹಮ್ಮಿಕೊಂಡಿದ್ದ ಛಾಯಾಗ್ರಹಣ ಹಾಗೂ ವಿಡಿಯೊಗ್ರಫಿ ಸ್ಪರ್ಧೆಯಲ್ಲಿ (Photography and videography competition) ವಿಸ್ತಾರ ನ್ಯೂಸ್‌ಗೆ ಎರಡು ಪ್ರಶಸ್ತಿಗಳು ಲಭಿಸಿದೆ. ವಿಸ್ತಾರ ನ್ಯೂಸ್ ಕ್ಯಾಮೆರಾಮನ್ ಮನೋಜ್, ಎರಡು ವಿಭಾಗಗಳಲ್ಲೂ ವಿಜೇತರಾಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯದ ಕುರಿತು ಫೋಟೊಗ್ರಫಿ ಹಾಗೂ ಮಳೆಗಾಲದ ಸಂತೆ ಕುರಿತ ವಿಡಿಯೊಗ್ರಫಿ ಥೀಮ್ ನೀಡಲಾಗಿತ್ತು. ಇದರಲ್ಲಿ ಕೊಡಗು ಪ್ರೆಸ್‌ಕ್ಲಬ್‌ನ 15ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಸ್ಪರ್ಧೆಯ ಎರಡೂ ವಿಭಾಗಗಳಲ್ಲಿ ವಿಸ್ತಾರ ನ್ಯೂಸ್ ಕ್ಯಾಮೆರಾಮನ್ ಮನೋಜ್ ಎರಡು ಪ್ರಶಸ್ತಿ ಗೆದ್ದಿದ್ದಾರೆ.
ಫೋಟೊಗ್ರಫಿ ಸ್ಪರ್ಧೆಯಲ್ಲಿ ಒಬ್ಬರಿಗೆ ಮೂರು ಫೋಟೊಗಳನ್ನು ನೀಡಲು ಅವಕಾಶ ಇದ್ದು, ಅದರಲ್ಲಿ ಎಲೆಯ ಮೇಲೆ ಕುಳಿತ ನೋಣ, ಮರದಲ್ಲಿ ಇದ್ದ ಜೇಡ ಎರಡು ಫೋಟೊಗಳನ್ನು ಮನೋಜ್ ತೆಗೆದಿದ್ದರು. ಆ ಫೋಟೊಗಳು ಆಯ್ಕೆಯಾಗುವುದರೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡರು. ಹಾಗೆಯೇ ವಿಡಿಯೋಗ್ರಫಿ ಶೂಟ್‌ನಲ್ಲೂ ಕೂಡ ಮೊದಲ ಸ್ಥಾನ ಪಡೆದುಕೊಂಡರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಬದುಕಿನ ಮಧುರ ಕ್ಷಣಗಳನ್ನು ಅವಿಸ್ಮರಣೀಯಗೊಳಿಸಿದ ಫೋಟೊಗ್ರಾಫರ್‌ಗಳಿಗೆ ಶುಭಾಶಯ!
ಫೋಟೊಗ್ರಫಿ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಕರುಣ್ ಕಾಳಯ್ಯ ಹಾಗೂ ಮೂರನೇ ಬಹುಮಾನವನ್ನು ಮೋಹನ್ ಪಡೆದುಕೊಂಡರು. ಪ್ರೇಮ್ ಹಾಗೂ ಅಬ್ದುಲ್ಲಾ ಸಮಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.
ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಸ್ಥಳೀಯ ಸುದ್ದಿವಾಹಿನಿಯ ಸಂತೋಷ್ ರೈ ಹಾಗೂ ರಿಜ್ವಾನ್ ಹುಸೇನ್ ಪಡೆದುಕೊಂಡರು. ಗೋಪಾಲ್ ಸೋಮಯ್ಯ ಸಮಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.
ಇದನ್ನೂ ಓದಿ | Raj B Shetty: ಸೆನ್ಸಾರ್ನಿಂದ ಯುಎ ಸರ್ಟಿಫಿಕೇಟ್ ಪಡೆದ ‘ಟೋಬಿ’!
ಕಾರ್ಯಕ್ರಮದ ತೀರ್ಪುಗಾರಾಗಿ ಮುಂಗಾರು ಮಳೆ ಖ್ಯಾತಿಯ ಕೃಷ್ಣ, ಹಿರಿಯ ಪತ್ರಕರ್ತ ಗೌರಿಶ್ ಅಕ್ಕಿ ಹಾಗೂ ಹೀಗೂ ಉಂಟೆ ಕಾರ್ಯಕ್ರಮದ ಛಾಯಗ್ರಹಕರಾದ ಗುರುಚರಣ್ ಭಾಗವಹಿಸಿದ್ದರು.