ದಾವಣಗೆರೆ ಸಮಾಜ ಸೇವಕ ಡಾ. ಆರ್.ಎಲ್ ಉಮಾಶಂಕರ್ ಅವರ ಕಿರು ಪರಿಚಯ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯನ್ನು ಬಹಳ ಹಿಂದೆಯೇ ಜಾರಿಗೆ ತಂದವರು ಉದ್ಯಮಿ ಡಾ. ಆರ್.ಎಲ್. ಉಮಾಶಂಕರ್. ದಾವಣಗೆರೆಯ ಉಮಾಶಂಕರ್ ಅವರು ಸಮಾಜ ಸೇವಕರು. ರಾಜನಹಳ್ಳಿ, ಮದ್ದೂರಾಯಪ್ಪ ಫ್ಯಾಮಿಲಿ ಜನಪ್ರಿಯವಾಗಿದೆ.
ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಿರುವ ಶ್ರೀ ಉಮಾಶಂಕರ್ ಅಮೆರಿಕದ ನ್ಯೂಜೆರ್ಸಿಯ ಮೊರಿಸ್‌ಟೌನ್‌ನಲ್ಲಿರುವ ಅಲೈಡ್ ಕೆಮಿಕಲ್ಸ್ ಕಾರ್ಪೊರೇಷನ್‌ನಲ್ಲಿ ಸಿಸ್ಟಮ್ಸ್ ಎಂಜಿನಿಯರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
44 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಲಕ್ಷ್ಮಣ್ ಕೆಮಿಕಲ್ಸ್ ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಶ್ರೀಯುತರು ಬೆಂಗಳೂರಿನ ಡೆಕ್ ಆಪ್ ಟೆಕ್ನಾಲಜಿಸ್‌ನ ಹಾಲಿ ನಿರ್ದೇಶಕರೂ ಹೌದು. ದಾವಣಗೆರೆಯ ಬಾಪೂಜಿ ಎಜುಕೇಷನ್ ಟ್ರಸ್ಟ್‌ನ ಆರ್ ಎಲ್ ಕಾನೂನು ಕಾಲೇಜಿನ ಅಧ್ಯಕ್ಷರಾಗಿರುವ ಇವರು, ʻಗುರುಶಾಂತʼ ಎಂಬ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ. ಡಿಆರ್‌ಎಂಎಲ್ ಟ್ರಸ್ಟ್ ಮತ್ತು ಡಾ. ಆರ್.ಎಲ್. ಉಮಾಶಂಕರ್ ಆರ್ಯ ವೈಶ್ಯ ಹಾಸ್ಟೆಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತರುಣ ಉದ್ಯಮಿಗಳಿಗೆ ಬೆಂಬಲ ನೀಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಡಾ. ಆರ್ ಎಲ್ ಉಮಾಶಂಕರ್ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್ ಸಿದ್ಧತೆಗೆ ಮೆಚ್ಚುಗೆ