ಹಾವೇರಿ: ಇಲ್ಲಿನ ಶಿಗ್ಗಾಂವಿ ಪಟ್ಟಣದ ಗುರುಭವನದಲ್ಲಿ ವಿಸ್ತಾರ ಸುದ್ದಿ ವಾಹಿನಿ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ಗಂಜಿಗಟ್ಟಿಯ ಶಿವಲಿಂಗೇಶ್ವರ ಮಠದ ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವೈಜನಾಥ ಶಿವಾಚಾರ್ಯ ಸ್ವಾಮಿಗಳು, ವಿಸ್ತಾರ ಸುದ್ದಿವಾಹಿನಿಗೆ ಶುಭ ಕೋರಿದರು. ವಿಷಯಗಳು ನಾಲ್ಕು ದಿಕ್ಕಿನಿಂದ ಬಂದಾಗ ಅದನ್ನು ಸುದ್ದಿ ಎಂದು ಕರೆಯುತ್ತೇವೆ. ಇವತ್ತು ಸುದ್ದಿವಾಹಿನಿಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ನಿಖರವಾಗಿ ಸುದ್ದಿ ಮಾಡುವವರಿಗೆ ಗೆಳೆಯರಿರುವುದು ಕಡಿಮೆ. ಈಗ ನಿಖರ ಹಾಗೂ ಜನಪರ ಘೋಷವಾಕ್ಯದೊಂದಿಗೆ ವಿಸ್ತಾರ ಸುದ್ದಿವಾಹಿನಿ ಆರಂಭವಾಗಿದೆ. ಜನರ ಕಲ್ಯಾಣಕ್ಕಾಗಿ ನಿಖರತೆಯನ್ನು ಕಾಪಾಡಿಕೊಂಡು ವಾಹಿನಿ ಬೆಳೆಯಲಿ ಎಂದು ಶುಭಕೋರಿದರು.
ವಿಸ್ತಾರ ಎಂದರೆ ವಿಕ್ಟರಿ- ಮಾಜಿ ಶಾಸಕ ಅಜ್ಜಂಫೀರ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಮಾತನಾಡಿ, ವಿಸ್ತಾರ ಎನ್ನುವ ಹೆಸರು “ವಿ”ಯಿಂದ ಆರಂಭವಾಗುತ್ತದೆ. ವಿ ಎಂದರೆ ವಿಕ್ಟರಿ, ಅಂದರೆ ಗೆಲುವಿನ ಸಂಕೇತ. ಹೀಗಾಗಿ ವಿಸ್ತಾರ ನ್ಯೂಸ್ ದೇಶವ್ಯಾಪಿ ಪ್ರಸಿದ್ಧಿ ಪಡೆಯಲಿ ಎಂದು ಶುಭ ಹಾರೈಸಿದರು. ವಿಸ್ತಾರ ನ್ಯೂಸ್ ಎಲ್ಲ ರಂಗದಲ್ಲಿ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಸ್ತಾರ ಎಂದರೆ ಅದ್ಭುತ ಶಕ್ತಿ
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ವಿಸ್ತಾರ ಎಂದರೆ ಅದ್ಭುತ ಶಕ್ತಿ, ವಿಸ್ತಾರ ಎಂದರೆ ಪರಿವರ್ತನೆಯ ಸಂಕೇತವಾಗಿದ್ದು, ಈ ವಾಹಿನಿಯ ಮೂಲಕ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗಲಿ, ವಿ ಎಂದರೆ ವಿಶಿಷ್ಟ, ವಿಭಿನ್ನ, ವಿಶೇಷವಾಗಿರುವಂತದ್ದಾಗಿದೆ. ಹೆಸರಿಗೆ ತಕ್ಕಂತೆ ಈ ವಾಹಿನಿ ವಿಭಿನ್ನ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ವಿಸ್ತಾರ ಬಳಗಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಇದನ್ನೂ ಓದಿ | Vistara News Launch | ವಿಸ್ತಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ: ವಿರೂಪಾಕ್ಷಪ್ಪ ಬಳ್ಳಾರಿ