Site icon Vistara News

Vistara News Launch | ಗಣಿನಾಡಿನ ಮಲೆನಾಡು ಖ್ಯಾತಿಯ ಸಂಡೂರಿನಲ್ಲಿ ಮೇಳೈಸಿದ ವಿಸ್ತಾರ ಕನ್ನಡ ಸಂಭ್ರಮ

Vistara News launch Kannada sambhrama Sandur

ಬಳ್ಳಾರಿ: ಗಣಿನಾಡಿನ ಮಲೆನಾಡು ಖ್ಯಾತಿಯ ಸಂಡೂರಿನಲ್ಲಿ ವಿಸ್ತಾರ ಕನ್ನಡ ಸಂಭ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ವಚನಗಾಯನ ಮತ್ತು ಭರತನಾಟ್ಯಕ್ಕೆ ಸಂಡೂರಿನ ಜನರು ತಲೆದೂಗಿದರು. ಸಂಡೂರಿನ ವಿರಕ್ತಮಠದಲ್ಲಿ ನಡೆದ ಮೂರು ತಾಸುಗಳು ವಿಸ್ತಾರ ಕನ್ನಡ ಸಂಭ್ರಮದಲ್ಲಿ (Vistara News Launch) ವಿಜಯಕುಮಾರ್‌ ಅವರ ವಚನಗಾಯನ ಮತ್ತು ಕೊಟ್ರೇಶ್‌ ತಂಡದ ಭರತನಾಟ್ಯವು ಜನರನ್ನು ರಂಜಿಸಿತು. ವಿಸ್ತಾರ ನ್ಯೂಸ್‌ನ ವೆಬ್‌ಸೈಟ್‌ ಮತ್ತು ಚಾನೆಲ್‌ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ಕೇಳಿಬಂದವು.

ಹರಿಪ್ರಕಾಶ್‌ ಕೋಣೆಮನೆ ಶ್ರಮವೇ ವಿಸ್ತಾರಕ್ಕೆ ಶ್ರೀರಕ್ಷೆ:
ವಿಸ್ತಾರ ನ್ಯೂಸ್‌, ಕನ್ನಡ ಸಾಹಿತ್ಯ ಪರಿಷತ್‌, ಪ್ರಭುದೇವರ ಜನ ಕಲ್ಯಾಣ ಸಂಸ್ಥೆ ಮತ್ತು ಅಕ್ಕನ ಬಳಗ ಸಂಡೂರು ಜಂಟಿಯಾಗಿ ಏರ್ಪಡಿಸಿದ್ದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಪ್ರಭುಮಹಾಸ್ವಾಮಿಗಳು ಮಾತನಾಡಿ, ವಿಸ್ತಾರ ಚಾನೆಲ್‌ನ ನೇತೃತ್ವ ವಹಿಸಿರುವ ಹರಿಪ್ರಕಾಶ್‌ ಕೋಣೆಮನೆಯವರು ಈಗಾಗಲೇ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡಿ ಹಲವು ವಿಭಿನ್ನ ಕಾರ್ಯಕ್ರಮದ ಮೂಲಕ ನಂಬರ್‌ ಒನ್‌ ಪತ್ರಿಕೆಯಾಗಿ ಮಾಡುವಲ್ಲಿ ಶ್ರಮವಹಿಸಿದ್ದರು. ಅವರ ಪತ್ರಿಕೋದ್ಯಮದ ಅನುಭವ ಮತ್ತು ಶ್ರಮವೇ ವಿಸ್ತಾರ ಚಾನೆಲ್‌ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದರು.

ಜನರ ಭಾವನೆಗೆ ತಕ್ಕಂತೆ ವಿಸ್ತಾರ ಕಾರ್ಯನಿರ್ವಹಣೆ:
ಸುದ್ದಿ ಚಾನೆಲ್‌ಗಳ ಸಂಖ್ಯೆ ಹೆಚ್ಚಿರುವಾಗ ದಿಟ್ಟತನದಿಂದ ತಮ್ಮದೇ ಆದ ನಿರೂಪಣಾ ಶೈಲಿಯನ್ನು ರೂಢಿಸಿಕೊಂಡು ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಐದು ಯೂಟ್ಯೂಬ್‌ ಚಾನೆಲ್‌ ಹೊರತಂದಿರುವುದು ಅವರ ಸಮಾಜಮುಖಿ ಕೆಲಸಕ್ಕೆ ಕೈಗನ್ನಡಿಯಾಗಿದೆ. ಹಣದ ಸಾಕ್ಷರತೆ, ಆರೋಗ್ಯ, ಕೃಷಿ, ಧಾರ್ಮಿಕ ಮತ್ತು ಮನೋರಂಜನೆ ವಿಷಯದಲ್ಲಿ ಯೂಟ್ಯೂಬ್‌ ಚಾನೆಲ್‌ಗಳು ಉತ್ತಮವಾಗಿ ಮೂಡಿ ಬಂದಿವೆ. ಅನಗತ್ಯ ವಿಚಾರಗಳಿಗೆ ಒತ್ತು ಕೊಡದೆ, ಜನರ ಉಪಯುಕ್ತ ಮಾಹಿತಿಯನ್ನು ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿ. ಎಂಟರ್‌ಟೈನ್‌ಮೆಂಟ್‌, ಮ್ಯೂಸಿಕ್‌, ಪ್ರೊಡಕ್ಷನ್‌ ಕೂಡ ಆರಂಭವಾಗುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದರು.

ಇದನ್ನೂ ಓದಿ | Vistara News Launch | ಸಮಾಜಕ್ಕೆ ನಿಖರ ಸುದ್ದಿ, ಜ್ಞಾನ ಪಸರಿಸುವ ವಾಹಿನಿಗಳ ಅಗತ್ಯ ಹೆಚ್ಚಾಗಿದೆ: ಶಾಸಕ ಹರತಾಳು ಹಾಲಪ್ಪ

ಕಲೆಗೆ ಆದ್ಯತೆ ನೀಡುವಂತಾಗಲಿ:
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ವಿ.ಟಿ.ಕಾಳೆ ಮಾತನಾಡಿ, ರಾಜಕೀಯ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಡದೆ, ಕಲೆ, ಸಾಹಿತ್ಯಕ್ಕೆ ಆದ್ಯತೆ ನೀಡಬೇಕು. ಒಂದೇ ವಿಚಾರವನ್ನು ಪದೇಪದೆ ತೋರಿಸುವ, ಒಂದೇ ವಿಷಯಕ್ಕೆ ಜೋತು ಬೀಳುವ ಕೆಲಸವನ್ನು ವಿಸ್ತಾರ ನ್ಯೂಸ್‌ ಮಾಡಬಾರದು. ಇತರ ಚಾನೆಲ್‌ಗಳಿಗಿಂತ ಭಿನ್ನವಾಗಿ ಮತ್ತು ಜನರ ಭಾವನೆಗಳಿಗೆ, ಮನೋಭಾವನೆಗೆ ತಕ್ಕಂತೆ ಸುದ್ದಿಯನ್ನು ಪ್ರಕಟಿಸುವ ಜನರ ಮನಸ್ಸಿಗೆ ಹತ್ತಿರವಾಗಬೇಕೆಂದು ತಿಳಿಸಿದರು.

ವೈಭವೀಕರಣ ಹೆಚ್ಚಾಗದಿರಲಿ:
ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ್‌ ಮಾತನಾಡಿ, ಸಮಾಜದಲ್ಲಿ ನಡೆಯುವ ಕ್ರೈಂಗಳನ್ನು, ಅಶ್ಲೀಲತೆಗಳನ್ನು ಹೆಚ್ಚಾಗಿ ವೈಭವೀಕರಣ ಮಾಡದೆ, ಸಮಾಜಕ್ಕೆ ಒಳಿತಾಗುವ, ಸಂಸ್ಕಾರ ಮತ್ತು ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್‌ ಬೇವೂರು ಮಾತನಾಡಿ, ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂಬುದಕ್ಕೆ ಹಲವು ನಿದರ್ಶನಗಳು ಇವೆ, ವಿಸ್ತಾರ ಚಾನೆಲ್‌ನ ಯಶಸ್ಸು ಸಾಧ್ಯವಾಗಿದೆ ಎಂದರು. ಸಿಪಿಐ ಹಾಲೇಶ್‌ ಮಾತನಾಡಿ, ಪತ್ರಿಕೆ, ಟಿವಿ ಮತ್ತು ಡಿಜಿಟಲ್‌ ಮಾಧ್ಯಮದಲ್ಲಿ ಅನುಭವ ಹೊಂದಿರುವ ಪತ್ರಕರ್ತರ ತಂಡದೊಂದಿಗೆ ವಿಸ್ತಾರ ಹೊರ ಬರುತ್ತಿದೆ. ಯಶಸ್ಸು ಖಂಡಿತ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಜಯಕುಮಾರ್‌ ಅವರು ವಚನ ಗಾಯನ ಮಾಡಿದರೆ, ಕುಮಾರ ಸ್ವಾಮಿ ಅವರು ತಬಲ ಸಾಥ್‌ ನೀಡಿದರು. ಇನ್ನು ನಾಟ್ಯ ಕಲಾ ನೃತ್ಯ ತರಬೇತಿ ಕೇಂದ್ರದ ಎಚ್‌. ಕೊಟ್ರೇಶ್‌ ಮತ್ತು ತಂಡದವರು ಗಣಪತಿ ಹಾಡು, ಪುನೀತ್‌ ರಾಜ್‌ಕುಮಾರ್‌ ಹಾಡಿಗೆ ಹೆಜ್ಜೆ ಹಾಕಿ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ನಾಗನಗೌಡ, ಸಂಡೂರು ಸಿಪಿಐ ಹಾಲೇಶ್‌, ಅಕ್ಕನ ಬಳಗದ ಸದಸ್ಯರು ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ | Vistara News Launch | ವಿಸ್ತಾರ ರಾಜ್ಯಾದ್ಯಂತ ವಿಸ್ತರಿಸಲಿ: ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

Exit mobile version