34 ವರ್ಷಗಳಿಂದ ಸಿನಿರಸಿಕರನ್ನು ರಂಜಿಸುತ್ತಿರುವ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಅಗ್ರ ಸ್ಟಾರ್ ನಟರಲ್ಲಿ ಒಬ್ಬರು. 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಈ ಸಾರ್ವಭೌಮ ಅಭಿನಯಿಸದ ಪಾತ್ರಗಳೇ ಇಲ್ಲ. ಶಿವರಾಜ್ ಕುಮಾರ್ ಕೇವಲ ನಟರಷ್ಟೇ ಅಲ್ಲ. ಟಿವಿ ನಿರೂಪಕರು ಮತ್ತು ಚಿತ್ರ ನಿರ್ಮಾಪಕರೂ ಹೌದು. ಅವರು ಕಾಯಕ ಯೋಗಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ತೆರೆಕಂಡ ಮೊದಲ ಮೂರೂ ಚಿತ್ರಗಳು ಶತದಿನೋತ್ಸವ ಕಂಡು ಹ್ಯಾಟ್ರಿಕ್ ಹೀರೊ ಆದ ಶಿವರಾಜ್ ಕುಮಾರ್ ಇವತ್ತಿಗೂ ಪಾದರಸದಂತೆ ಕುಣಿಯಬಲ್ಲ ಶಕ್ತಿವಂತರು. 1986ರಲ್ಲಿ ತೆರೆ ಕಂಡ ‘ಆನಂದ’ ಚಿತ್ರದ ಮೂಲಕ ಕನ್ನಡ ಬೆಳ್ಳಿ ತೆರೆಗೆ ಪದಾರ್ಪಣೆ. ಅಲ್ಲಿಂದ ಶುರುವಾದ ಶಿವರಾಜ್ ಕುಮಾರ್ ಅವರ ಸಿನಿಮಾ ಯಾನ ನಿರಂತರವಾಗಿ ಮುಂದುವರಿದಿದೆ.
ಇದನ್ನೂ ಓದಿ | Kannada New Film | ಕಿರೀಟಿ ನೂತನ ಸಿನಿ ಸೆಟ್‌ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್
ಚಿತ್ರರಂಗದ ಸಮಸ್ಯೆಗಳಿಗೆ ಕಿವಿಯಾಗುವ ಅವರು, ಸದ್ದಿಲ್ಲದೇ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಕಲಾಸೇವೆಯನ್ನು ಗುರುತಿಸಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ತಮ್ಮ ಸಿನಿಮಾಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನಾಲ್ಕು ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಬಾರಿ ಫಿಲ್ಮ್ ಫೇರ್ ಅವಾರ್ಡ್ ಕೂಡ ಸಂದಿದೆ. ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Shiva Rajkumar | ಶಿವರಾಜ್‌ಕುಮಾರ್ ನಟನೆಯ ಘೋಸ್ಟ್ ಚಿತ್ರಕ್ಕೆ ಮಾಲಿವುಡ್ ನಟ ಜಯರಾಮ್ ಎಂಟ್ರಿ: ವಿಡಿಯೊ ವೈರಲ್!