Site icon Vistara News

Vistara News Launch | ಮಾಧ್ಯಮಗಳು ಬದ್ಧತೆಯಿಂದ ಕಾರ್ಯನಿರ್ವಹಿಸಲಿ: ಕೆ.ಬಿ ಕೋಳಿವಾಡ ಕಿವಿಮಾತು

Vistara News Launch ಕೆಬಿ ಕೋಳಿವಾಡ

ಹಾವೇರಿ: ನಾ ಮುಂದೆ ನೀ ಮುಂದೆ ಎನ್ನುವ ಸ್ಪರ್ಧಾತ್ಮಕ ಮನೋಭಾವದಿಂದ ಮಾಧ್ಯಮಗಳು ಜನರಿಗೆ ಶೀಘ್ರವಾಗಿ ಸುದ್ದಿ ತಲುಪಿಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಬದ್ಧತೆಯಿಂದ ಕಾರ್ಯನಿರ್ವಹಿಸಲಿ ಎಂದು ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ (Vistara News Launch) ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಕಿವಿಮಾತು ಹೇಳಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ವಿಸ್ತಾರ ಸುದ್ದಿವಾಹಿನಿಯಿಂದ ನಡೆದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೊದಲು ಸುದ್ದಿಯನ್ನು ಪಾರಿವಾಳದ ಮೂಲಕ ಕಳುಹಿಸಲಾಗುತ್ತಿತ್ತು. ಕಾಲ ಬದಲಾದಂತೆ ಸುದ್ದಿ ನೀಡುವ ವ್ಯವಸ್ಥೆಯು ಬದಲಾಗಿದೆ. ಪತ್ರಿಕೆಗಳ ನಂತರ ಟಿವಿ ಮಾಧ್ಯಮ ಆರಂಭವಾಗಿದ್ದು, ಸಮಾಜಕ್ಕೆ ಒಳಿತನ್ನು ನೀಡುವ ನಿಟ್ಟಿನಲ್ಲಿ ಸುದ್ದಿವಾಹಿನಿಗಳು ಕೆಲಸವನ್ನು ಮಾಡಲಿ. ಹರಿಪ್ರಕಾಶ್ ಕೋಣೆಮನೆಯವರ ನೇತೃತ್ವದಲ್ಲಿ ವಿಸ್ತಾರ ನ್ಯೂಸ್ ಸುದ್ದಿವಾಹಿನಿ ಆರಂಭವಾಗಿದೆ. ಬದ್ಧತೆಯಿಂದ ಸತ್ಯಸಂಗತಿಗಳನ್ನು ಅತಿ ಶೀಘ್ರದಲ್ಲಿ ವಿಸ್ತಾರ ನ್ಯೂಸ್ ಜನರಿಗೆ ಸುದ್ದಿ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಆರ್‌.ಎಂ ಕುಬೇರಪ್ಪ, ವಿಸ್ತಾರ ನ್ಯೂಸ್ ವಾಹಿನಿಗೆ ಶುಭ ಹಾರೈಸಿದರು. ತುಂಬ ಜನ ಮಾಧ್ಯಮ ಕ್ಷೇತ್ರದಲ್ಲಿ ಸಂಕಷ್ಟದಿಂದ ಬೆಳೆದು ಬಂದು ಮಾಧ್ಯಮ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ವಿಸ್ತಾರ ನ್ಯೂಸ್ ಮೌಲ್ಯಯುತ ಸುದ್ದಿಗಳನ್ನು ನೀಡಲಿದೆ ಎನ್ನುವ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ | Vistara News Launch | ಗಣಿನಾಡಿನ ಮಲೆನಾಡು ಖ್ಯಾತಿಯ ಸಂಡೂರಿನಲ್ಲಿ ಮೇಳೈಸಿದ ವಿಸ್ತಾರ ಕನ್ನಡ ಸಂಭ್ರಮ

Exit mobile version