ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಯಿತು. ಹಾನಗಲ್ ಕುಮಾರಸ್ವಾಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚೆನ್ನಬಸವ ಸ್ವಾಮಿ ಮಠದ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದರು.
ಬಳಿಕ ಮಾತನಾಡಿದ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು, ವಿಸ್ತಾರ ನ್ಯೂಸ್ ಒಳ್ಳೆಯ ಕಾರ್ಯಕ್ರಮಗಳನ್ನು ಜನರಿಗೆ ನೀಡುವ ಮೂಲಕ ಜನ ಮನ್ನಣೆ ಗಳಿಸಲಿ. ಸಂಗೀತ ಸಾಹಿತ್ಯ, ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿ, ಜನರ ಧ್ವನಿಯಾಗಿ ಕೆಲಸ ಮಾಡಲಿ ಎಂದು ಶುಭ ಕೋರಿದರು.
ಸತ್ಯದೆಡೆಗೆ ವಿಸ್ತಾರ ಮಾಧ್ಯಮ ಹೆಜ್ಜೆ ಇರಲಿ- ಮಾಜಿ ಶಾಸಕ ನಂದಿಹಳ್ಳಿ
ಮುಖ್ಯ ಅಥಿತಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ವಿಸ್ತಾರ ನ್ಯೂಸ್ ಚಾನೆಲ್ ಜಗದಗಲ, ಮುಗಿಲಗಲ ಬೆಳೆಯಲಿ. ಸತ್ಯವನ್ನು ಯಾವತ್ತೂ ಮರೆಮಾಚಲು ಆಗುವುದಿಲ್ಲ. ಹೀಗಾಗಿ ಸತ್ಯದೆಡೆಗೆ ತಮ್ಮ ಮಾಧ್ಯಮ ಹೋಗಬೇಕು. ಹಡಗಲಿ ತಾಲೂಕಿನಲ್ಲಿ ನಿಮ್ಮ ಚಾನಲ್ ಬಗೆಗಿನ ಮಾಹಿತಿಯನ್ನು ನಾನೇ ಜನರಿಗೆ ತಲುಪಿಸುತ್ತೇನೆ ಎಂದರು.
ವಿಸ್ತಾರ ನ್ಯೂಸ್ ಟೈಟಲ್ ಅದ್ಭುತ- ಪ್ರಕಾಶ್
ಇದೇ ವೇಳೆ ಜಿ.ಬಿ.ಆರ್.ಸಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಪ್ರಕಾಶ್ ಮಾತನಾಡಿ, ಈ ಸುದ್ದಿವಾಹಿನಿಗೆ “ವಿಸ್ತಾರ” ಎಂಬ ಟೈಟಲ್ ಕೊಟ್ಟಿದ್ದೇ ಅದ್ಭುತವಾಗಿದೆ. ನಿಖರ, ಜನಪರ ಎನ್ನುವ ಘೋಷವಾಕ್ಯವೂ ವಿಶೇಷವಾಗಿದೆ. ಯಾವುದೇ ಸುದ್ದಿಯನ್ನು ತೋರಿಸಿದ್ದನ್ನೇ ತೋರಿಸದೇ ನಿಖರವಾದ, ಜನಪರವಾದ ವಿಷಯಗಳನ್ನು ಜನರಿಗೆ ಮುಟ್ಟಿಸಬೇಕು ಎಂದರು.
ಹೂವಿನಹಡಗಲಿ ಕಸಾಪ ತಾಲೂಕಾಧ್ಯಕ್ಷ ವೀರೇಂದ್ರ ಪಾಟೀಲ್ ಮಾತಾನಾಡಿ, ಸಮಾಜದಲ್ಲಿನ ಏರುಪೇರುಗಳನ್ನು ಜನರಿಗೆ ತೋರಿಸುವ ಮೂಲಕ ವಿಸ್ತಾರ ಸುದ್ದಿವಾಹಿನಿಯು ಜನಮನ್ನಣೆ ಪಡೆಯಲಿ ಎಂದು ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೂವಿನಹಡಗಲಿ ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಯಾವುದೇ ಆಮಿಷಕ್ಕೊಳಗಾಗದೇ ನಿಖರವಾಗಿ ಸುದ್ದಿ ಬಿತ್ತರಿಸಿ ರಾಜ್ಯದ ತುಂಬಾ ಒಳ್ಳೆಯ ಚಾನೆಲ್ ಆಗಿ ಬೆಳೆಯಲಿ ಎಂದು ಆಶಿಸಿದರು.
ವಿಸ್ತಾರ ಕನ್ನಡ ಸಂಭ್ರಮ ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯನಗರ ಜಿಲ್ಲಾ ವರದಿಗಾರ ಪಾಂಡುರಂಗ ಜಂತ್ಲಿ, ವಿಸ್ತಾರ ವಾಹಿನಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇಡೀ ಹೂವಿನಹಡಗಲಿ ತಾಲೂಕಿನ ಜನರ ಮೇಲಿದೆ ಎಂದರು.
ಕಾರ್ಯಕ್ರಮಕ್ಕೆ ಬಿ.ಯುವರಾಜಗೌಡ ಹಾಗೂ ಅವರ ತಂಡ ಸಂಗೀತ ಕಾರ್ಯಕ್ರಮ ನೀಡಿದರು. ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಶಿಕ್ಷಕರಾದ ಉಮಾಪತಿ ನಿರೂಪಿಸಿ, ನಾಗರಾಜ್ ವಂದಿಸಿದರು.
ಇದನ್ನೂ ಓದಿ | Vistara News Launch | ಕಾರವಾರದಲ್ಲಿ ವಿಸ್ತಾರ ಕನ್ನಡ ಸಂಭ್ರಮ, ಇದು ಜಿಲ್ಲೆಯ ಹೆಮ್ಮೆಯ ಚಾನೆಲ್ ಎಂಬ ಶ್ಲಾಘನೆ