Site icon Vistara News

Vistara News Launch | ಆರೋಗ್ಯಕರ ಸುದ್ದಿಯೊಂದಿಗೆ ವಿಸ್ತಾರ ನ್ಯೂಸ್‌ ಗಟ್ಟಿಯಾಗಿ ನಿಲ್ಲಲಿ: ನಿಜಗುಣ ಶಿವಯೋಗಿ ಸ್ವಾಮೀಜಿ

Vistara News Launch

ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದ ಪಟ್ಟಣದ ಪದ್ಮಶ್ರೀ ಡಾ.ವಿ.ಕೃ.ಗೋಕಾಕ್ ಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು (Vistara News Launch) ಹತ್ತಿಮತ್ತೂರಿನ ಮಠದ ಮ.ನಿ.ಪ್ರ ನಿಜಗುಣ ಶಿವಯೋಗಿ ಸ್ವಾಮೀಜಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಶ್ರೀಗಳು, ಮಾಧ್ಯಮ ಕ್ಷೇತ್ರ ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ, ಆರಂಭದಲ್ಲಿದ್ದ ರೇಡಿಯೋ ಈಗ ಗೌಣವಾಗಿದೆ. ಆದರೆ, ಪತ್ರಿಕೆಗಳು ವಿಕಾಸಗೊಳ್ಳುವುದರ ಜತೆಗೆ ಇಂದಿಗೂ ವಿಸ್ತಾರವಾಗಿ ಬೆಳೆದು ನಿಂತಿವೆ. ಅದಾದ ಬಳಿಕ ಬಂದ ದೃಶ್ಯ ಮಾಧ್ಯಮಗಳ ಪೈಕಿ ಕೆಲವು ವಾಹಿನಿಗಳು ಸಾಮಾಜಿಕ ಚಿಂತನೆ, ಆರೋಗ್ಯಕರ ಸುದ್ದಿ ಪ್ರಸಾರ ಮಾಡುವುದನ್ನು ಮರೆತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ | Vistara News Launch | ಮಾಧ್ಯಮಗಳಿಂದ ಸಮಾಜ ತಿದ್ದುವ ಕೆಲಸವಾಗಲಿ: ಬನ್ನಾಡಿ ಸೋಮನಾಥ ಹೆಗ್ಡೆ

ಇವುಗಳ ನಡುವೆ ಹಲವು ದೃಶ್ಯ ಮಾಧ್ಯಮಗಳು ಇಂದಿಗೂ ಸಮಾಜದ ಪರವಾಗಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ನಿಖರ-ಜನಪರ ಘೋಷವಾಕ್ಯ ಹೊಂದಿರುವ ವಿಸ್ತಾರ ನ್ಯೂಸ್‌ ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದಲ್ಲಿ ಆರಂಭವಾಗಿದೆ. ಈ ಚಾನೆಲ್‌ ‌ಸಾಮಾಜಿಕ ಚಿಂತನೆಯೊಂದಿಗೆ ಆರೋಗ್ಯಕರ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜನರ ನಡುವೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಸ್ವಾಮೀಜಿ‌ ವಿಶ್ವಾಸ ವ್ಯಕ್ತಪಡಿಸಿ, ವಿಸ್ತಾರ ಬಳಗಕ್ಕೆ ಶುಭ ಹಾರೈಸಿದರು.

ಇದೆ ವೇಳೆ ಕಾರ್ಯಕ್ರಮದಲ್ಲಿ ಭರತ ನಾಟ್ಯ ಮಾಡುವ ಮೂಲಕ ಬಾಲಕಿ ಅನನ್ಯ ಕಾರ್ಯಕ್ರಮಕ್ಕೆ ಮೆರಗು ತುಂಬಿದರು. ವೇದಿಕೆಯಲ್ಲಿ ಶೋಭಾ ನಿಸ್ಸೀಮ್ ಗೌಡ್ರ, ಶೈಲಾ ಎಚ್. ಮುದಿಗೌಡ್ರ, ರಾಜ್ ಮಹ್ಮದಖಾನ ಪಠಾಣ,
ಮೋಹನ ಮೆಣಸಿನಕಾಯಿ, ಗಂಗಾಧರ ಬಾಣದ, ಸುಮಂತ್ ಆರ್. ಸಿಂಧೂರ್ ಉಪಸ್ಥಿತರಿದ್ದರು. ನಾಡಗೀತೆ ಹಾಡಿದ ವಿದ್ಯಾ ಭಾರತಿ ಶಾಲೆಯ ಮಕ್ಕಳಿಗೆ ಹಾಗೂ ಭರತನಾಟ್ಯ ಮಾಡಿದ ಬಾಲಕಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್‌ ಮನೆಮಾತಾಗಲಿ, ಯಶಸ್ಸು ಸಾಧಿಸಲಿ: ಪಿ.ಎಂ.ಪ್ರಸನ್ನ

Exit mobile version