Site icon Vistara News

Vistara News Launch | ಜನರ ಅಗತ್ಯಕ್ಕೆ ತಕ್ಕಂತೆ ವಿಸ್ತಾರ ಕೆಲಸ: ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ

Vistara News Launch

ಬಳ್ಳಾರಿ: ಜಿಲ್ಲೆಯ ಕುರುಗೋಡಿನ ವಿದ್ಯಾವಸತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಅದ್ಧೂರಿಯಾಗಿ ನೆರವೇರಿತು. ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಅಗತ್ಯತೆ ಮತ್ತು ಅನಿವಾರ್ಯತೆ ಮನಗಂಡು ವಿಸ್ತಾರ ಸುದ್ದಿವಾಹಿನಿ ಕಾರ್ಯನಿರ್ವಹಿಸಲು ಮುಂದಾಗಿರುವುದಕ್ಕೆ ಜನಸ್ಪಂದನೆ ಸಿಕ್ಕೇ ಸಿಗುತ್ತದೆ. ಈಗಾಗಲೇ ಜನರ ಅಗತ್ಯತೆಯನ್ನು ಮನಗಂಡು ಐದು ಯೂಟ್ಯೂಬ್‌ ಚಾನೆಲ್‌ ತಂದಿರುವುದು ವಿಸ್ತಾರದ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಜನರ ಅಗತ್ಯತೆ ತಕ್ಕಂತೆ ಕೆಲಸ
ಓಂಕಾರದಿಂದ ಧಾರ್ಮಿಕ, ಮನಿ ಪ್ಲಸ್‌ನಿಂದ ಹಣಕಾಸು ಸಾಕ್ಷರತೆಯ ಜಾಗೃತಿ, ವಿಸ್ತಾರ ಹೆಲ್ತ್‌ನಿಂದ ಆರೋಗ್ಯ ಕಾಳಜಿ, ವಿಸ್ತಾರ ಸಿನಿಮಾದಿಂದ ಮನರಂಜನೆ, ವಿಸ್ತಾರ ಕೃಷಿಯಿಂದ ರೈತರ ಯಶಸ್ಸಿನ ಯಶೋಗಾಥೆ ಕುರಿತಾಗಿ ಯೂಟ್ಯೂಬ್‌ ಚಾನೆಲ್‌ಗಳನ್ನು ಹೊರ ತರುವ ಮೂಲಕ ಜನರ ಭಾವನೆ ಮತ್ತು ಮನೋಭಾವಕ್ಕೆ ತಕ್ಕಂತೆ ವಿಸ್ತಾರ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಹಲವು ನಿರೀಕ್ಷೆಗಳನ್ನು ಚಾನೆಲ್‌ ಹುಟ್ಟುಹಾಕಿದೆ. ಇನ್ನು ವಿಸ್ತಾರ ಡಿಜಿಟಲ್‌ ಮೂಲಕ ಮಾಧ್ಯಮ ಲೋಕದಲ್ಲಿ ಅತ್ಯುತ್ತಮ ಕೆಲಸವಾಗುತ್ತಿದೆ. ಹತ್ತು ಹಲವು ನಿರೀಕ್ಷೆಯನ್ನು ವಿಸ್ತಾರ ಹೆಚ್ಚಿಸುವಂತೆ ಮಾಡಿದೆ ಎಂದು ಸ್ವಾಮೀಜಿ ಹೇಳಿದರು.

ಗ್ರೇಡ್‌ ೧ ತಹಸೀಲ್ದಾರ್‌ ಮಲ್ಲೇಶ್‌ ಮಾತನಾಡಿ, ಈಗಾಗಲೇ ವಿಸ್ತಾರ ಚಾನೆಲ್‌ ನೋಡುತ್ತಿದ್ದೇವೆ, ಇತರ ಚಾನೆಲ್‌ಗೆ ಹೋಲಿಸಿದರೆ ಭಿನ್ನವಾಗಿ ಕಾಣುತ್ತಿದೆ. ಜನರಿಗೆ ಅಗತ್ಯ ಇರುವ ವಿಷಯಗಳನ್ನು ವಿಸ್ತಾರವಾಗಿ ಚಾನೆಲ್‌ ತೋರಿಸುತ್ತಿದೆ. ಇನ್ನು ವಿಸ್ತಾರ ಡಿಜಿಟಲ್‌ ಆ್ಯಪ್‌ ಉತ್ತಮ ಫೀಚರ್ಸ್‌ ಹೊಂದಿದೆ. ಜನರಿಗೆ ಬೇಕಾಗುವ ಹಲವು ವಿಷಯಗಳು ವಿಸ್ತಾರ ಆ್ಯಪ್‌ನಲ್ಲಿ ಅಳವಡಿಸಿರುವುದು ಓದುಗರನ್ನು ಆಕರ್ಷಿಸುತ್ತಿದೆ. ಎಲ್ಲ ಜಿಲ್ಲೆಗಳ ಸುದ್ದಿಗಳನ್ನು ಪ್ರತ್ಯೇಕವಾಗಿ ಇಲ್ಲಿ ನೋಡಬಹುದು ಎಂದರು.

ಪಿಎಸ್‌ಐ ಎನ್‌. ರಘು, ಕರ್ನಾಟಕ ರಾಜ್ಯ ಹಿರಿಯ ನಾಗರಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ಅನುದಾನಿತ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ಉಮಾಪತಿ ಗೌಡ, ವಿದ್ಯಾವಸತಿ ಪ್ರೌಢಶಾಲೆಯ ಕಾರ್ಯದರ್ಶಿ ಚಕ್ರವರ್ತಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ್‌ ಮಸೂತಿ, ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಚಾನಾಳ್‌ ಅಮರೇಶಪ್ಪ, ಎಎಸ್‌ಐ ಹೂವಣ್ಣ ಸೇರಿ ಹಲವರು ಇದ್ದರು. ವಿದ್ಯಾವಸತಿ ಶಾಲೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಮಾಜದ ಮೇಲೆ ಅದರಲ್ಲೂ ಮಕ್ಕಳ ಮೇಲೆ ಮೊಬೈಲ್‌ ಬಳಕೆಯಿಂದಾಗುವ ಪರಿಣಾಮ ಕುರಿತಾಗಿ ಹಾಸ್ಯ ಕಾರ್ಯಕ್ರಮದೊಂದಿಗೆ ಎರ‍್ರಿಸ್ವಾಮಿ ಅವರ ಹಾಸ್ಯಭರಿತ ಜಾಗೃತಿ ಮತ್ತು ಜಡೇಶ್‌ ಅವರ ಜಾನಪದ ಹಾಡುಗಳು ವಿಸ್ತಾರ ಕನ್ನಡ ಸಂಭ್ರಮದಲ್ಲಿ ಗಮನ ಸೆಳೆದವು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್ ಬಡವರು, ಶೋಷಿತರ ದನಿಯಾಗಲಿ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Exit mobile version