ಕೊಪ್ಪಳ: ಇಲ್ಲಿನ ಕನಕಗಿರಿ ಪಟ್ಟಣದಲ್ಲಿ ವಿಶೇಷವಾದ ಕವಿಗೋಷ್ಠಿಯೊಂದಿಗೆ ವಿಸ್ತಾರ ಕನ್ನಡ ಸಂಭ್ರಮವನ್ನು (Vistara News Launch) ನಡೆಸಲಾಯಿತು. ಮಾಜಿ ಸಚಿವ ಶಿವರಾಜ ತಂಗಡಗಿ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಶಿವರಾಜ ತಂಗಡಗಿ ಶುಭಾಶಯ ಕೋರಿದರು.
ಬಳಿಕ ಮಾತನಾಡಿದ ಶಿವರಾಜ ತಂಗಡಗಿ, ಸುದ್ದಿ ಮಾಧ್ಯಮಗಳು ಎಷ್ಟೇ ಬರಲಿ. ಆದರೆ, ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಗುಣಮಟ್ಟ ಇದ್ದರೆ ಜನರು ಖಂಡಿತವಾಗಿಯೂ ನೋಡುತ್ತಾರೆ. ಸತ್ಯ ಬಿತ್ತರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಗುಣಮಟ್ಡದ ಸುದ್ದಿಗಳು ಪ್ರಸಾರ ಮಾಡುವುದು ಹಾಗೂ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು. ಜನರ ಸಮಸ್ಯೆಗಳನ್ನು ವ್ಯವಸ್ಥೆಯ ಮುಂದೆ ಇಟ್ಟು ಪರಿಹಾರ ಕೊಡಿಸುವತ್ತ ಮುಂದಡಿ ಇಡಬೇಕು. ಈ ಕಾರ್ಯವನ್ನು ವಿಸ್ತಾರ ನ್ಯೂಸ್ ಮಾಡುತ್ತದೆ ಎಂಬ ಭರವಸೆ ಇದೆ ಎಂದರು.
ಒಳ್ಳೆಯ ಸುದ್ದಿ ಮಾಧ್ಯಮವಾಗಿ ಬೆಳೆಯಲಿ
ವಿಸ್ತಾರ ಚಾನೆಲ್‌ನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಮುದ್ರಣ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಿ ಸಾಕಷ್ಟು ಅನುಭವ ಇರುವವರು. ಈಗ ಹೊಸ ಸುದ್ದಿ ವಾಹಿನಿಯನ್ನು ಕಟ್ಡಿದ್ದು, ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಸ್ತಾರ ನ್ಯೂಸ್ ಒಳ್ಳೆಯ ಸುದ್ದಿ ಮಾಧ್ಯಮವಾಗಿ ಬೆಳೆಯಲಿ ಎಂದು ಶಿವರಾಜ ತಂಗಡಗಿ ಶುಭ ಹಾರೈಸಿದರು.
ಇದೇ ವೇಳೆ ಅನೇಕ ಕವಿಗಳು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಹಾಂತೇಶ ಸಜ್ಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಮೆಹಬೂಬಹುಸೇನ್, ಡಾ. ಡಿ.ಎಂ. ಅರವಟಗಿಮಠ, ಬೆಸ್ಟ್ ಪಿಯು ಕಾಲೇಜ್‌ನ ರಾಘವೇಂದ್ರ, ಪರಸಪ್ಪ ಹೊರಪೇಟೆ, ಕನಕರೆಡ್ಡಿ ಕೆರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | Actor Shahrukh Khan | ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶಾರುಖ್ ಖಾನ್‌ರನ್ನು ತಡೆದಿದ್ದೇಕೆ?