Site icon Vistara News

Vistara News Launch | ಕನ್ನಡ ಭಾಷಾ ಸೊಗಡಲ್ಲಿ ಹಾಸ್ಯ ಪ್ರಜ್ಞೆಗೆ ಸಾಕ್ಷಿಯಾದ ವಿಸ್ತಾರ ಕನ್ನಡ ಸಂಭ್ರಮ

ಶಿವಮೊಗ್ಗ: ಇಲ್ಲಿನ ಸೊರಬದ ರಂಗಮಂದಿರದಲ್ಲಿ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಕಾರ್ಯಕ್ರಮವು ಭಾನುವಾರ ನಡೆಯಿತು. ಕನ್ನಡ ಸಾಂಸ್ಕೃತಿಕ ಜಗಲಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಯಕ್ಷಗಾನ ಕಲಾವಿದ ಗುರುನಂದನ್ ಹೊಸೂರು ಉದ್ಘಾಟಿಸಿದರು.

ಕನ್ನಡ ಸಂಭ್ರಮದ ಅಂಗವಾಗಿ ರೇವಣಪ್ಪ ಬಿದರಗೇರಿ ರಚಿತ ಕುಬುಸ ಪುಸ್ತಕದ ಬಿಡುಗಡೆಯನ್ನು ಶಿವಮೊಗ್ಗದ ರಂಗಕರ್ಮಿ ಡಾ.ಚಿದಾನಂದ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಕನ್ನಡ ಭಾವ ಗೀತೆ, ಜಾನಪದ, ಚಲನಚಿತ್ರ ಗೀತಗಾಯನ, ಏಕವ್ಯಕ್ತಿ ನಾಟಕ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಕನ್ನಡ ಸಾಂಸ್ಕೃತಿಕ ಜಗಲಿಯ ಷಣ್ಮುಖಾಚಾರ್, ವಿಸ್ತಾರ ನ್ಯೂಸ್‌ನ ಶಿವಮೊಗ್ಗ ಬ್ಯೂರೊ ಮುಖ್ಯಸ್ಥ ವಿವೇಕ್ ಮಹಾಲೆ, ಕನ್ನಡ ಸಾಂಸ್ಕೃತಿಕ ಜಗಲಿಯ ಅಧ್ಯಕ್ಷ ಮಂಜಪ್ಪ ಹುಲ್ತಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಈರೇಶಪ್ಪ, ಉಪಾಧ್ಯಕ್ಷ ಮಧುರಾಯ್ ಶೇಟ್, ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಕಾರ್ಯದರ್ಶಿ ಶಿವಕುಮಾರ್ ಕಡಸೂರ್, ಕಾಂಗ್ರೆಸ್ ಮುಖಂಡ ಗಣಪತಿ ಹುಲ್ತಿಕೊಪ್ಪ ವಿಸ್ತಾರ ನ್ಯೂಸ್‌ಗೆ ಶುಭ ಹಾರೈಸಿದರು.

ಕಿರುತೆರೆ ಕಲಾವಿದ ಉದಯ ಅಂಕರವಳ್ಳಿ, ಶ್ರೀಪಾದ ಬಿಚ್ಚುಗತ್ತಿ, ಮಹೇಶ ಗೋಖಲೆ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಉಪಸ್ಥಿತರಿದ್ದರು. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬಳಸಲ್ಪಡುವ ಕನ್ನಡ ಭಾಷಾ ಸೊಗಡಿನ ಹಾಸ್ಯ ಪ್ರಸಂಗದ ಅಭಿನಯವನ್ನು ಶೈಲಾ ಹೆಬ್ಬಾರ್ ಸಂಗಡಿಗರು ನಡೆಸಿಕೊಟ್ಟರು. ವನಸುಮ ಬಳಗದಿಂದ ಜಾನಪದ ವೈಭವ ನಡೆಯಿತು. ಕನ್ನಡ ಸಾಂಸ್ಕೃತಿಕ ಜಗಲಿಯಿಂದ ಕಳೆದ ಆರು ದಿನಗಳ ಕಾಲ ನಿತ್ಯ ನಡೆದ ಮನೆಯಂಗಳದಲ್ಲಿ ಕನ್ನಡ ಸಂಭ್ರಮದ ಅತಿಥ್ಯ ನೀಡಿದವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | Drowned in Canal | ಕಾಲುವೆಯಲ್ಲಿನ ಮೋಟಾರ್‌ಗೆ ನೀರು ಹಾಕಲು ಹೋದಾಗ ಕಾಲು ಜಾರಿ ಬಿದ್ದು ಇಬ್ಬರು ನೀರುಪಾಲು

Exit mobile version