ಟಿ. ಎನ್. ಸೀತಾರಾಮ್ ಎಂದೇ ಚಿರಪರಿಚಿತರಾದ ಶ್ರೀ ತಳಗವಾರ ನಾರಾಯಣ ರಾವ್ ಸೀತಾರಾಮ್ (Vistara News Launch) ಸೂಕ್ಷ್ಮ ಸಂವೇದನೆಗೆ ಹೆಸರಾದ ಕಿರುತೆರೆಯ ಖ್ಯಾತ ನಿರ್ದೇಶಕರು. ಜತೆಗೆ ನಟ, ನಿರ್ಮಾಪಕ ಮತ್ತು ಸಾಹಿತಿ. ಅವರಿಗೆ ಕಾಯಕ ಯೋಗಿ ಪುರಸ್ಕಾರ ನೀಡಿ ಗೌರವಿಸಿದೆ. ಸಾಧಕರ ಕಿರುಪರಿಚಯ ಇಲ್ಲಿದೆ.
ರಂಗಭೂಮಿಯಲ್ಲಿ ಸಾಹಿತ್ಯ ಕೃಷಿ ಮಾಡುತ್ತ ಕಿರುತೆರೆ ಪ್ರವೇಶಿಸಿದ ಟಿ. ಎನ್.ಸೀತಾರಾಮ್ ‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ ಮುಕ್ತ’, ‘ಮಹಾಪರ್ವ’, ‘ಮಗಳು ಜಾನಕಿ’ ಮುಂತಾದ ಧಾರಾವಾಹಿಗಳ ಮೂಲಕ ಇತಿಹಾಸ ಸೃಷ್ಟಿಸಿದವರು. ಪಿ.ಲಂಕೇಶ್ ಮತ್ತು ಯು.ಆರ್.ಅನಂತಮೂರ್ತಿಯವರ ಪ್ರಭಾವದಿಂದ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಟಿ.ಎನ್. ಸೀತಾರಾಮ್.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಭೇಟಿ, ಶುಭ ಹಾರೈಕೆ
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ‘ಮತದಾನ’, ‘ಮೀರಾ ಮಾಧವ ರಾಘವ’, ‘ಕಾಫಿ ತೋಟ’ ಇವು ಟಿ. ಎನ್.ಸೀತಾರಾಮ್ ನಿರ್ದೇಶಿಸಿದ ಸಿನಿಮಾಗಳು. ಮತದಾನ ಚಿತ್ರಕ್ಕೆ ʻಅತ್ಯುತ್ತಮ ಪ್ರಾದೇಶಿಕ ಚಿತ್ರ’ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಕನ್ನಡದ ಗಾಢವಾದ ಪರಿಮಳ ಹೊಂದಿರುವ ಕತೆಗಳು, ಪಾತ್ರಗಳು ಹಾಗೂ ಸಂಭಾಷಣೆಗಳ ಮೂಲಕ ಕನ್ನಡಿಗರ ಮನೆಮನದಲ್ಲಿ ನಿಂತು, ದೃಶ್ಯಲೋಕವನ್ನು ಶ್ರೀಮಂತಗೊಳಿಸುತ್ತಿರುವ ಟಿ. ಎನ್.ಸೀತಾರಾಮ್ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆ ಪಡುತ್ತಿದೆ.
ಇದನ್ನೂ ಓದಿ | ಮಗಳು ಜಾನಕಿ ಧಾರಾವಾಹಿ | ಮುಂದುವರಿದ ಅಧ್ಯಾಯ ಇನ್ನು ನಿಮ್ಮ ಅಂಗೈಯಲ್ಲೆ!