Site icon Vistara News

MEDIA AWARDS : ವಿಸ್ತಾರ ನ್ಯೂಸ್‌ಗೆ ʼಟಿಎನ್‌ಐಟಿ ಪ್ರಾಮಿಸಿಂಗ್ ಕನ್ನಡ ನ್ಯೂಸ್ ಚಾನೆಲ್ʼ ಪ್ರಶಸ್ತಿಯ ಗರಿ

TNIT MEDIA AWARDS-2023

#image_title

ಬೆಂಗಳೂರು: ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಟಿಎನ್‌ಐಟಿ ಮೀಡಿಯಾ ಅವಾರ್ಡ್ಸ್-2023 (MEDIA AWARDS) ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ವಿಸ್ತಾರ ನ್ಯೂಸ್‌ ಚಾನೆಲ್‌ಗೆ ʼಟಿಎನ್‌ಐಟಿ ಪ್ರಾಮಿಸಿಂಗ್ ಕನ್ನಡ ನ್ಯೂಸ್ ಚಾನೆಲ್ ಪ್ರಶಸ್ತಿʼ ನೀಡಲಾಗಿದೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಿರಿ ಕನ್ನಡ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ.

ವೇದಿಕೆಯಲ್ಲಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಪ್ರಶಸ್ತಿ ಘೋಷಿಸಿದರು. ನಟ ಶರಣ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವಿಸ್ತಾರ ನ್ಯೂಸ್‌ ಪರವಾಗಿ ವಿಸ್ತಾರ ನ್ಯೂಸ್‌ ಸಿಒಒ ಪರಶುರಾಮ್ ಅವರು ಸ್ವೀಕರಿಸಿದರು.

ಖ್ಯಾತ ಪತ್ರಕರ್ತ, ಹೊಸತನದ ಹರಿಕಾರ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದಲ್ಲಿ ಆರಂಭವಾಗಿರುವ ವಿಸ್ತಾರ ನ್ಯೂಸ್‌, ವಿಭಿನ್ನ ಕಾರ್ಯಕ್ರಮ, ಗುಣಮಟ್ಟದ ಸುದ್ದಿ ಪ್ರಸಾರದ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸ ಹಾಗೂ ನಂಬಿಕೆ ಗಳಿಸಿದೆ. ಮಾಧ್ಯಮ ಕ್ಷೇತ್ರದಲ್ಲಿನ ಈ ಸಾಧನೆಯನ್ನು ಪರಿಗಣಿಸಿ ಪ್ರಾಮಿಸಿಂಗ್ (ಭರವಸೆಯ) ಕನ್ನಡ ನ್ಯೂಸ್ ಚಾನೆಲ್ ಪ್ರಶಸ್ತಿ ನೀಡಲಾಗಿದೆ.

Exit mobile version