1. Indira Canteen: ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಹೆಚ್ಚಳ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ಇಂದಿರಾ ಕ್ಯಾಂಟೀನ್ (Indira Canteen) ಊಟದ ದರದಲ್ಲಿ ಹೆಚ್ಚಳ ಮಾಡಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗ್ರಾಹಕರಿಗೆ ಹಳೆಯ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಓವರಾಗಿ ಆಡಿದ್ರೆ ಹಸ್ತಕ್ಕೇ ಆಪರೇಷನ್ ಮಾಡ್ತೀವಿ ಹುಷಾರ್; ಸಿ.ಟಿ ರವಿ ಎಚ್ಚರಿಕೆ
ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರಕಾರವು (Congress Government) ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ (Reverse Operation) ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ (CT Ravi) ಅವರು ಎಚ್ಚರಿಕೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ST Somashekhar : ಸೋಮಶೇಖರ್‌ಗೆ ಅತೃಪ್ತಿ ಇದೆ, ಆದರೆ ಪಕ್ಷ ಬಿಟ್ಟು ಹೋಗುವಷ್ಟಲ್ಲ ಎಂದ ಸಿ.ಟಿ. ರವಿ
3. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ‘ಕಾವೇರಿ’ ಅಸ್ತ್ರ – ಆಗಸ್ಟ್ 21ರಂದು ಮಂಡ್ಯ ನಗರದ ಜೊತೆ ದಶಪಥ ಬಂದ್
ರಾಜ್ಯದಲ್ಲಿ ಮಳೆ ಇಲ್ಲದೆ ನೀರಿಗೆ ಹಾಹಾಕಾರ ಹುಟ್ಟಿಕೊಂಡಿರುವ ನಡುವೆಯೇ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಿಂದ (KRS Dam) ತಮಿಳುನಾಡಿಗೆ ನೀರು ಬಿಡುಗಡೆ (Water released to Tamilnadu) ಮಾಡುತ್ತಿರುವ ರಾಜ್ಯ ಸರ್ಕಾರದ (Cauvery Dispute) ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಆಗಸ್ಟ್ 21ರಂದು ಮಂಡ್ಯ ನಗರ ಬಂದ್ (Mandya town bundh on Aug 21) ಹಾಗೂ ಅದೇ ಭಾಗದಲ್ಲಿ ಬೆಂಗಳೂರು-ಮೈಸೂರು Express wayನಲ್ಲಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: Sumalatha Ambarish : ನಾನು ಬಿಜೆಪಿ ಸದಸ್ಯೆಯಲ್ಲ, ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ; ಸುಮಲತಾ ಮಾತಿನ ಅರ್ಥವೇನು?
4. ಡಿಕೆಶಿಗೆ ಸಿದ್ದರಾಮಯ್ಯ ಬಣದಿಂದ ಚೆಕ್‌ಮೆಟ್- ‘ಗೃಹಲಕ್ಷ್ಮಿ’ ಚಾಲನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್
ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ಗೃಹ ಲಕ್ಷ್ಮಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಚಾಲನೆ ನೀಡುವುದು ಎಂದು ಆರಂಭದಲ್ಲೇ ನಿರ್ಧಾರವಾಗಿದ್ದರೂ ಇದೀಗ ಕಾರಣವೇ ಇಲ್ಲದೆ ಅದನ್ನು ಮೈಸೂರಿಗೆ ಶಿಫ್ಟ್ ಮಾಡಲಾಗಿದೆ. ಇದು ಸೂಪರ್ ಸಿಎಂ ರೀತಿ ವರ್ತಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಕೊಟ್ಟಿರುವ ಚೆಕ್‌ಮೆಟ್ ಎಂದು ವಿಶ್ಲೇಷಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: Gruha lakshmi scheme : ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ; ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ
5. ವಿಸ್ತಾರ ಅಂಕಣ: ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೇರಲು ಕರ್ನಾಟಕದ ಕೊಡುಗೆ ಎಷ್ಟು ʼಗ್ಯಾರಂಟಿʼ?
ಯುವ ಜನರಿಗೆ ಕೌಶಲ್ಯ ಕಲಿಸುವ, ಉದ್ಯಮಶೀಲತೆ (entrepreneurship) ಬೆಳೆಸುವ, ಹೆಚ್ಚೆಚ್ಚು ಜನರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ಬೆಳೆಸಿದರೆ ಕರ್ನಾಟಕದ ಆರ್ಥಿಕತೆ ಸಬಲವಾಗುತ್ತದೆಯೇ ವಿನಃ ಕೆಲಸ ಕೊಡದೆ ಮನೆಯಲ್ಲಿ ಕೂರಿಸಿ ತಿಂಗಳಿಗೆ ಮೂರು ಸಾವಿರ ರೂ. ನೀಡುವುದರಿಂದಲ್ಲ ಎಂದು ಹೇಳಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ.
ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
6. 50 ಕೋಟಿ ದಾಟಿದ ಜನಧನ್ ಬ್ಯಾಂಕ್ ಖಾತೆ ಸಂಖ್ಯೆ; 50% ಮಹಿಳೆಯರು ಎಂದು ಮೋದಿ ಹರ್ಷ
7. Bangalore-Chennai Train : ನಿಜ, ಇನ್ನು ಕೇವಲ 4 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು!
8. Rahul Gandhi: ಲಡಾಕ್‌ನಲ್ಲಿ ರಾಹುಲ್ ಗಾಂಧಿ ಬೈಕ್ ರೈಡ್, ಕ್ರಿಶ್‌ನಂತೆ ಬೈಕ್ ಓಡಿಸಿದ ಕಾಂಗ್ರೆಸ್ ನಾಯಕ
9. Train Fire Accident: ಬೆಂಕಿಗೆ ಉದ್ಯಾನ್ ಎಕ್ಸ್‌ಪ್ರೆಸ್‌ನ ಎರಡು ಕೋಚ್ ಕರಕಲು, ಅವಘಡಕ್ಕೆ ಏನು ಕಾರಣ?
10. ರಜಿನಿಕಾಂತ್ ಜೊತೆ ಜೈಲರ್ ಸಿನಿಮಾ ವೀಕ್ಷಿಸಿದ ಯುಪಿ ಸಿಎಂ ಯೋಗಿ..