Site icon Vistara News

Vows Letter: ತನಗೆ ಆಗದವರು ನರಳಿ ನರಳಿ ಸಾಯಲಿ; ಹೀಗೊಂದು ಹರಕೆ ಪತ್ರ ಬರೆದು ದೇವರಿಗೆ ಮೊರೆಯಿಟ್ಟ ಭಕ್ತ!

ಕೊಳ್ಳೇಗಾಲ ಹರಕೆ ಪತ್ರ ಲಕ್ಷ್ಮೀ ನಾರಾಯಣ ದೇವಸ್ಥಾನ

ಚಾಮರಾಜನಗರ: ಇದನ್ನು ಮನುಷ್ಯನ ನೈತಿಕ ಅಧಃಪತನ ಎನ್ನಬೇಕೋ ಅಥವಾ ಆ ವ್ಯಕ್ತಿಯ ದ್ವೇಷದ ಪರಮಾವಧಿ ಎನ್ನಬೇಕೋ? ಒಟ್ಟಿನಲ್ಲಿ ಭಕ್ತನೊಬ್ಬನ ವಿಚಿತ್ರ ಹರಕೆ ಪತ್ರವೊಂದು (Vows Letter) ಕೊಳ್ಳೇಗಾಲದ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಹುಂಡಿ ಎಣಿಕೆ ವೇಳೆ ಸಿಕ್ಕಿದೆ. ಅದರಲ್ಲಿ, ತನಗೆ ಆಗದ ಕುಟುಂಬ ಸರ್ವನಾಶವಾಗಲಿ ಎಂದು ವ್ಯಕ್ತಿಯೊಬ್ಬನ ಹರಕೆ ಹೊತ್ತಿರುವುದು ಗೊತ್ತಾಗಿದೆ.

ಪತ್ರದಲ್ಲಿ ಬಳ್ಳಾರಿ ಜಿಲ್ಲೆಯ ವಿಳಾಸವನ್ನು ಬರೆಯಲಾಗಿದೆ. ಅಲ್ಲದೆ, ಹನುಮಾರ್ ರಾಮ ನಾಯಕ ಎಂಬುವವರ ಹೆಸರು ಬರೆದು, ಅವರು “ರಕ್ತ ಕಕ್ಕಿ ಸಾಯಲಿ, ನರಳಿ ನರಳಿ ಸಾಯಲಿ..” ಎಂದು ಉಲ್ಲೇಖಿಸಲಾಗಿದೆ. ನೀಲಾಬಾಯಿ, ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿ ಬಾಯಿ ಇವರೆಲ್ಲರೂ ನರಳಿ ಸಾಯಲಿ ಎಂದು ಹರಕೆ ಪತ್ರದಲ್ಲಿ ಭಕ್ತನೊಬ್ಬ ಉಲ್ಲೇಖಿಸಿದ್ದಾನೆ.

ಈ ಹಿಂದೆಯೂ ಹೆಣ್ಣನ್ನು ಕರುಣಿಸು, ಇಂತಹವನೇ ತಾಳಿ ಕಟ್ಟಬೇಕು ಎಂದು ಚಾಮರಾಜನಗರದ ಚಾಮರಾಜೇಶ್ವರ ಹಾಗೂ ಮುಕ್ಕಡಹಳ್ಳಿ ದೇವಾಲಯದಲ್ಲಿ ಹುಂಡಿ ಎಣಿಕೆ ವೇಳೆ ವಿಚಿತ್ರ ಬೇಡಿಕೆ‌ಗಳುಳ್ಳ ಪತ್ರಗಳು ಸಿಕ್ಕಿದ್ದವು. ಆದರೆ, ಈ ವ್ಯಕ್ತಿ ತೀರಾ ಕ್ರೂರತೆಯಿಂದ ಯೋಚನೆ ಮಾಡಿದ್ದು, ತನಗೆ ಆಗದವರು ಸರ್ವನಾಶ ಆಗಲಿ ಎಂದು ಹಿಡಿಶಾಪ ಹಾಕಿದ್ದಲ್ಲದೆ, ಹರಕೆಯನ್ನು ಈಡೇರಿಸುವಂತೆ ಲಕ್ಷ್ಮೀ ನಾರಾಯಣನ ಬಳಿ ಮೊರೆಯಿಟ್ಟಿದ್ದಾನೆ.

ಇದನ್ನೂ ಓದಿ | Suicide Case: ಬಸವನ ಬಾಗೇವಾಡಿಯಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ

Exit mobile version